ಕನಸುಗಾರ ಅಪ್ಪ
- ಸಂಪಾದಕೀಯ
- Dec 16, 2024
- 1 min read
ಕನಸುಗಾರ ಅಪ್ಪ

ಹುಟ್ಟಿನಿಂದ ಮಗುವಿಗೆ ತಾಯಿಯೇ ಮೊದಲ ಗುರು
ಆದರೆ ಅಪ್ಪ ಕಣ್ಣಿಗೆ ಕಾಣದೆ ಹೋದದ್ದು ನಾ ಕಾಣೆ
ಅಪ್ಪನ ಮನಸ್ಸು ಕುಗ್ಗಿತು.. ಆದರೆ
ನನ್ನ ಮನಸ್ಸು ಕರಗಿತು
ಅಪ್ಪ ತನ್ನ ಮನೆಯ ಜವಾಬ್ದಾರಿ ಹೊತ್ತು
ಖುಷಿಯ ದಿನಗಳನ್ನು ಮರೆತು ಬಿಟ್ಟು ಕುಳಿತದ್ದು ನಾ ಕಣೆ
ಆದರೆ.......!
ಮಕ್ಕಳ ಜೀವನಕ್ಕೆ ಜೀವವನ್ನೇ ತ್ಯಾಗ ಮಾಡಿದ ಅಪ್ಪ
ಮಕ್ಕಳ ಮುಂದೆ ಶೂನ್ಯವಾದದನ್ನು ನಾ ಕಾಣೆ
ಏಕೆಂದರೆ..
ಅಪ್ಪ ತನಕ ಕನಸನ್ನು ಬದಿಗಿಟ್ಟು ನಿಂತು ಬಿಟ್ಟ
ಯಾವುದೇ ತಪ್ಪು ಇಲ್ಲದೆ ಅಪರಾಧಿ ಸ್ಥಾನದಲ್ಲಿ ನಿಂತು ಬಿಟ್ಟ
ಮಕ್ಕಳಿಗೆ ಅಪ್ಪ ಶತ್ರುವಾದ..
ಆದರೆ ' ಅಪ್ಪ ತನ್ನ ಶ್ರಮದ ಪಾಠ ಕಲಿಸಿ.
ಅಪ್ಪನ ತಾಳ್ಮೆಯ ನನಗೆ ಒಳಿಸಿ
ಅಪ್ಪನಿಂದ ಸಮಾಜದ ಗೌರವ ಗಳಿಸಿ
ಅಪ್ಪನನ್ನೇ ಮರೆತುಬಿಟ್ಟೆವು.........
ಇಂದು ನಾವು.😢
"ಎಲ್ಲಾ ಸ್ವಾರ್ಥದ ಜಗತ್ತು ಇಲ್ಲಿ ತನ್ನ ಜೀವನ ನಡೆದರೆ ಸಾಕು ಅಂತ ನೋಡುವವರೆ ಹೆಚ್ಚು ಆದರೆ ಒಬ್ಬ ತಂದೆ ಮಾತ್ರ ಯಾವುದೇ ಸ್ವಾರ್ಥ ಇಲ್ಲದೇ ತನಗೆ ಇಲ್ಲದಿದ್ರು ತಮ್ಮ ಮನೆಯವರಿಗಾಗಿ ಎಲ್ಲವನ್ನು ಅರ್ಪಿಸುತಾನೇ."
Write✍️ by :LIKHIN.Sullia
+91 81472 13842
G F G C Bellary PERUVAJE
Comments