ಮ್ಯಾರಥಾನ್ನಲ್ಲಿ ಓಡಿ ಬೆಳ್ಳಿ ಪದಕ ಗೆದ್ದ ಶಿರೂರು ಗುಡ್ಡ ದುರಂತದಲ್ಲಿ ಅನಾಥವಾಗಿದ್ದ ಶ್ವಾನ
- ಸಂಪಾದಕೀಯ
- Mar 9
- 1 min read
ಮ್ಯಾರಥಾನ್ನಲ್ಲಿ ಓಡಿ ಬೆಳ್ಳಿ ಪದಕ ಗೆದ್ದ ಶಿರೂರು ಗುಡ್ಡ ದುರಂತದಲ್ಲಿ ಅನಾಥವಾಗಿದ್ದ ಶ್ವಾನ

ಶಿರೂರು ಗುಡ್ಡ ಕುಸಿತ ಘಟನೆಯಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಈ ಶ್ವಾನ ಮತ್ತೆ ಎಲ್ಲರ ಗಮನ ಸೆಳೆಯುತ್ತಿದೆ.
ಉತ್ತರ ಕನ್ನಡ ಪೊಲೀಸ್ ಆಯೋಜಿಸಿದ್ದ ಮ್ಯಾರಥಾನ್ನಲ್ಲಿ ಈ ಶ್ವಾನ ಐದು ಕಿ.ಮೀ ಓಡುವ ಮೂಲಕ ಅಚ್ಚರಿಗೊಳಿಸಿದ್ದು, ಬೆಳ್ಳಿ ಪದಕ ಪಡೆದುಕೊಂಡಿದೆ. ಶಾಸಕ ಸತೀಶ್ ಸೈಲ್ ಶ್ವಾನಕ್ಕೆ ಪದಕ ತೊಡಿಸಿದರು.
2024 ಜುಲೈ 16 ರಂದು ನಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಲಕ್ಷ್ಮಣ್ ನಾಯ್ಕ ಕುಟುಂಬ ಸೇರಿ ಹನ್ನೊಂದು ಜನರು ಮೃತಪಟ್ಟಿದ್ದರು. ಈ ವೇಳೆ ಮಾಲೀಕ ಲಕ್ಷ್ಮಣ್ ನಾಯ್ಕ ಮೃತಪಟ್ಟ ಘಟನೆ ಸ್ಥಳದಲ್ಲಿ ಶ್ವಾನ ರೋಧಿಸಿತ್ತು. ಇದನ್ನು ಗಮನಿಸಿದ ಉತ್ತರ ಕನ್ನಡ ಎಸ್ಪಿ ಎಂ ನಾರಾಯಣ್ ಈ ಶ್ವಾನವನ್ನು ತನ್ನ ಮನೆಗೆ ತಂದು ಸಾಕಿದ್ದಾರೆ. ಶ್ವಾನಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ತರಬೇತಿ ಕೂಡ ನೀಡಲಾಗಿದೆ. ಇಂದು ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮ್ಯಾರಥಾನ್ನಲ್ಲಿ ಎಸ್ಪಿ ಎಂ ನಾರಾಯಣ್ ಜೊತೆ ಶ್ವಾನ ಓಡುವ ಮೂಲಕ ಎಲ್ಲರನ್ನು ಗಮನ ಸೆಳೆದಿದೆ.

Comments