ಇಂದಿನಿಂದ ಭಾರತದಲ್ಲಿ ಆಪಲ್ ಸ್ಟೋರ್ ಅಪ್ಲಿಕೇಷನ್ ಆರಂಭ
- ಸಂಪಾದಕೀಯ
- Jan 17
- 1 min read
ಇಂದಿನಿಂದ ಭಾರತದಲ್ಲಿ ಆಪಲ್ ಸ್ಟೋರ್ ಅಪ್ಲಿಕೇಷನ್ ಆರಂಭ

ಆಪಲ್ ಕಂಪನಿಯು ಭಾರತದಲ್ಲಿ ಆಪಲ್ ಸ್ಟೋರ್ ಅಪ್ಲಿಕೇಶನ್ ಅನ್ನು ಜ.17ರ ಶುಕ್ರವಾರ ಬಿಡುಗಡೆ ಮಾಡಿದೆ.
ಇದು ಗ್ರಾಹಕರಿಗೆ ಆಪಲ್‌ನ ಉತ್ಪನ್ನಗಳು ಮತ್ತು ಸೇವೆಗಳನ್ನು ಖರೀದಿಸಲು ಸಹಾಯಕವಾಗಿದೆ. ದೇಶಾದ್ಯಂತದ ಗ್ರಾಹಕರು ಆಪ್ ಸ್ಟೋರ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು ಮತ್ತು ಆಪಲ್‌ನಿಂದ ನೇರವಾಗಿ ಶಾಪಿಂಗ್ ಮಾಡಬಹುದಾಗಿದೆ.
ಭಾರತದಲ್ಲಿ ಇನ್ನೂ ಹೆಚ್ಚಿನ ಬಳಕೆದಾರರನ್ನು ತಲುಪಲು ಆಪಲ್ ಸ್ಟೋರ್ ಅಪ್ಲಿಕೇಶನ್ ಪರಿಚಯಿಸಲಾಗಿದೆ ಎಂದು ಆಪಲ್‌ನ ರಿಟೇಲ್ ಆನ್‌ಲೈನ್ ಮುಖ್ಯಸ್ಥ ಕರೆನ್ ರಾಸ್ಮುಸ್ಸೆನ್ ಹೇಳಿದರು.
ಆಪಲ್ ಸ್ಟೋರ್ ಅಪ್ಲಿಕೇಶನ್‌ನೊಂದಿಗೆ, ಗ್ರಾಹಕರು ನಮ್ಮ ಎಲ್ಲಾ ಅದ್ಭುತ ಉತ್ಪನ್ನಗಳನ್ನು ಶಾಪಿಂಗ್ ಮಾಡಲು, ಇನ್ನಷ್ಟು ಅನುಕೂಲಕರವಾಗಿದೆ ಎಂದ ಅವರು ಇತ್ತೀಚಿನ ಆಪಲ್ ಉತ್ಪನ್ನಗಳು, ಪರಿಕರಗಳು ಮತ್ತು ಸೇವೆಗಳನ್ನು ಸುಲಭವಾಗಿ ಹುಡುಕಲು ಒಂದೇ ತಾಣ ದೊರಕಿದಂತಾಗಿದೆ ಎಂದು ತಿಳಿಸಿದರು.
ಶಾಪರ್‌ಗಳು ತಮ್ಮ ಮ್ಯಾಕ್ ಅನ್ನು ಹೆಚ್ಚು ಶಕ್ತಿಶಾಲಿ ಚಿಪ್, ಹೆಚ್ಚುವರಿ ಮೆಮೊರಿ ಅಥವಾ ಹೆಚ್ಚುವರಿ ಸಂಗ್ರಹಣೆಯೊಂದಿಗೆ ಕಸ್ಟಮೈಸ್ ಮಾಡಬಹುದು. ಅದರ ಜೊತೆಗೆ ಅವರ ಏರ್‌ಪಾಡ್‌ಗಳು, ಐಪ್ಯಾಡ್, ಆಪಲ್ ಪೆನ್ಸಿಲ್ ಪ್ರೊ, ಆಪಲ್ ಪೆನ್ಸಿಲ್ (2 ನೇ ತಲೆಮಾರಿನ) ಮತ್ತು ಏರ್ ಟ್ಯಾಗ್ ಅನ್ನು ಎಂಟು ಭಾಷೆಗಳ ಆಯ್ಕೆಯಲ್ಲಿ ಎಮೋಜಿ, ಹೆಸರುಗಳು, ಮೊದಲಕ್ಷರಗಳು ಮತ್ತು ಸಂಖ್ಯೆಗಳ ಮಿಶ್ರಣದೊಂದಿಗೆ ಉಚಿತವಾಗಿ ಬರೆಸಬಹುದು.
ಆಪಲ್ ಸ್ಟೋರ್ ಅಪ್ಲಿಕೇಶನ್ ಸುಲಭ ವಿತರಣೆ ಮತ್ತು ಪಿಕಪ್‌ಗಾಗಿ ಆಯ್ಕೆಗಳನ್ನು ಒದಗಿಸುತ್ತದೆ. ಆದ್ದರಿಂದ ಗ್ರಾಹಕರು ತಮ್ಮ ಹೊಸ ಆಪಲ್ ಉತ್ಪನ್ನಗಳನ್ನು ತ್ವರಿತವಾಗಿ ಮತ್ತು ಅನುಕೂಲಕರವಾಗಿ ಪಡೆಯಬಹುದು.
ಸದ್ಯವೇ ಬೆಂಗಳೂರಿನಲ್ಲಿ ಆಪಲ್ ಸ್ಟೋರ್ : ಭಾರತದಲ್ಲಿ ಆಪಲ್‌ನ ಮೊದಲ ಎರಡು ಮಳಿಗೆಗಳು ಏಪ್ರಿಲ್ 2023 ರಲ್ಲಿ ದೆಹಲಿ ಮತ್ತು ಮುಂಬೈನಲ್ಲಿ ಆರಂಭವಾಗಿವೆ.
ಶೀಘ್ರದಲ್ಲೇ ಬೆಂಗಳೂರು, ಪುಣೆ, ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಲ್ಲಿ ಆಪಲ್ ಸ್ಟೋರ್ ತೆರೆಯಲಾಗುವುದು ಎಂದು ಕಂಪೆನಿ ತಿಳಿಸಿದೆ.
Comments