ಕೆಂಪು ಗೆಣಸು: ಆಹಾರ ಕ್ರಮದಿಂದ ಆರೋಗ್ಯದ ಹರಿವಿನತ್ತ
- nanupatrakarta
- Dec 9, 2024
- 1 min read
ಕೆಂಪು ಗೆಣಸು: ಆಹಾರ ಕ್ರಮದಿಂದ ಆರೋಗ್ಯದ ಹರಿವಿನತ್ತ

ಒಂದು ಕಾಲದಲ್ಲಿ ಅತೀ ಕಡಿಮೆ ದರದಲ್ಲಿ ದೊರಕುತ್ತಿದ್ದ ಕೆಂಪು ಗೆಣಸಿನ ಬೆಲೆ ಇತ್ತೀಚೆಗೆ ಪ್ರತಿ ಕೆ.ಜಿಗೆ ₹100 ದಾಟಿದ್ದನ್ನು ಕಾಣಬಹುದು. ಈಗ ರೇಟ್ ಕಡಿಮೆಯಾದರೂ, ಇದರ ಮಹತ್ವ ಮತ್ತೆ ಮನಗಾಣುತ್ತಿದೆ. ಹಿಂದಿನ ಕಾಲದಲ್ಲಿ ಈ ಗೆಣಸು ಗ್ರಾಮೀಣ ಜೀವನದ ಪ್ರಮುಖ ಆಹಾರವಾಗಿತ್ತು. ಜನರು ಗೆಣಸು ಬೇಯಿಸಿ ತಿಂದು ದಿನದ ಪ್ರಯಾಣಕ್ಕೆ ಬೆಳ್ಳಂಬೆಳಗ್ಗೆ ಗದ್ದೆ ಕೆಲಸಕ್ಕೆ ಹೋಗುತ್ತಿದ್ದರು. ಆಗಿನ ಆಹಾರ ಕ್ರಮ ಆರೋಗ್ಯಕರವಾಗಿದ್ದು, ದೈಹಿಕ ಶಕ್ತಿಯನ್ನು ಹೆಚ್ಚಿಸುತ್ತಿತ್ತು.

ಇಂದು ಪಶ್ಚಾತ್ಯ ಆಹಾರ ಪದ್ಧತಿಗೆ ಮಾರುಹೋಗುತ್ತಿರುವಾಗ, ಹಳೆಯ ಆರೋಗ್ಯಕರ ಆಹಾರ ಪದ್ಧತಿ ಮರೆಯಲಾಗುತ್ತಿದೆ. ದೋಸೆ, ಪುಲಾವ್, ಮ್ಯಾಗಿ, ನೂಡಲ್ಸ್ ಮುಂತಾದ ಪಶ್ಚಿಮ ಧೋರಣೆಯ ಉಪಹಾರಗಳು ದೈನಂದಿನ ಮೆನುಗಳಲ್ಲಿ ಮೆರೆಯುತ್ತಿವೆ.
ಗೆಣಸಿನ ಬೆಳೆದುಹಾಕುವ ವಿಧಾನ:
ಕೆಂಪು ಗೆಣಸು ಬೇರೆ ಬಣ್ಣಗಳಲ್ಲಿ ದೊರೆಯುತ್ತದೆ. ಬಳ್ಳಿಯನ್ನು ಅರ್ಧ ಅಡಿ ಅಥವಾ ಹೆಚ್ಚಿನ ಉದ್ದದಲ್ಲಿ ಕತ್ತರಿಸಿ, ಮರಳು ಮಿಶ್ರಿತ ಕಪ್ಪು ಅಥವಾ ಕೆಂಪು ಮಣ್ಣಿನಲ್ಲಿ ನೆಟ್ಟರೆ ಉತ್ತಮ. ಸಡಿಲವಾದ ಮಣ್ಣು ಗೆಡ್ಡೆಗಳ ಉತ್ತಮ ಬೆಳವಣಿಗೆಯ ಮೂಲ. ಸುಟ್ಟ ಮಣ್ಣು ಮಿಶ್ರಿತ ನೆಲದ ಬಳಕೆ ಸಮೃದ್ಧ ಬೆಳೆಗೆ ನೆರವಾಗುತ್ತದೆ. ಬಳ್ಳಿ ನೆಟ್ಟ 3-4 ತಿಂಗಳಲ್ಲಿ ಗೆಡ್ಡೆಗಳು ಬೆಳೆಯುತ್ತವೆ. ತೇವ ಮತ್ತು ಚಳಿ ಪ್ರದೇಶಗಳಲ್ಲಿ ಈ ಬೆಳೆ ಹೆಚ್ಚು ಸಫಲವಾಗುವುದಿಲ್ಲ.
ಆರೋಗ್ಯ ಪ್ರಯೋಜನಗಳು:
ಡಯಟ್ ಮಾಡುತ್ತಿರುವವರಿಗೆ ಕೆಂಪು ಗೆಣಸು ಉತ್ತಮ ಆಯ್ಕೆಯಾಗಿದೆ. ಕಡಿಮೆ ಕ್ಯಾಲೋರಿ ಇರುವ ಕಾರಣ ತೂಕ ಇಳಿಸಲು ಸಹಾಯಕ ಎಂದು ಸಂಶೋಧನೆಗಳು ಹೇಳಿವೆ. ಕೆಂಪು ಗೆಣಸನ್ನು ಬೇಯಿಸಿ ಉಪ್ಪಿನೊಂದಿಗೆ ತಿನ್ನಬಹುದು ಅಥವಾ ಓಗರಣ್ಣೆಯ ರೂಪದಲ್ಲೂ ಸೇವಿಸಬಹುದು.
ಜೀರ್ಣಶಕ್ತಿ, ಕಣ್ಣು, ಹೃದಯ ಮತ್ತು ಮೆದುಳಿನ ಆರೋಗ್ಯಕ್ಕಾಗಿ ಇದು ಬಹು ಲಾಭದಾಯಕ. ಆರೋಗ್ಯಕರ ಜೀವನಕ್ಕಾಗಿ ವಾರಕ್ಕೆ ಒಂದೇನಾದರೂ ಸಿಹಿ ಗೆಣಸನ್ನು ಸೇವಿಸುವಂತೆ ತಜ್ಞರು ಶಿಫಾರಸು ಮಾಡುತ್ತಿದ್ದಾರೆ.
ಬರಹ:ಆಶಾ ನಾಯಕ್
ಕೃಷಿಕೆ:
ವರದಿ: ಕೃಷಿ ವಿಭಾಗ
















Comments