ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಪ್ರಯಾಣಿಕರಿಗೆ ಬಿಸ್ಕತ್ ಹಂಚಿದ ಬೆಂಗಳೂರು ಆಟೋ ಡ್ರೈವರ್...!
- ಸಂಪಾದಕೀಯ
- Feb 5
- 1 min read
ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಪ್ರಯಾಣಿಕರಿಗೆ ಬಿಸ್ಕತ್ ಹಂಚಿದ ಬೆಂಗಳೂರು ಆಟೋ ಡ್ರೈವರ್...!

ಬೆಂಗಳೂರಿನ ಆಟೋ ಚಾಲಕನೊಬ್ಬ ತನ್ನ ಹೆಂಡತಿ ತನ್ನ ತವರು ಮನೆಗೆ ಹೋಗಿದ್ದನ್ನು ಯಾವ ಮಟ್ಟಿಗೆ ಸಂಭ್ರಮಿಸಿದ್ದಾನೆ ಎಂದರೆ ಆಕೆ ತವರಿಗೆ ಹೋಗಿರುವ ವಿಚಾರ ಇದೀಗ ಸೋಷಿಯಲ್ ಮೀಡಿಯಾದ ತುಂಬೆಲ್ಲ ಹರಿದಾಡುತ್ತಿದೆ.
ತನ್ನ ಹೆಂಡತಿ ಆಕೆಯ ಅಮ್ಮನ ಮನೆಗೆ ಹೋದ ಖುಷಿ ತಾಳಲಾರದೆ ಆಕೆಯ ಗಂಡ ಊರ ತುಂಬೆಲ್ಲ ಈ ವಿಚಾರವನ್ನು ಢಂಗುರ ಸಾರಿದ್ದಾನೆ. ನನ್ನ ಹೆಂಡತಿ ತವರು ಮನೆಗೆ ಹೋಗಿರುವುದರಿಂದ ನಾನು ಬಹಳ ಸಂತೋಷವಾಗಿದ್ದೇನೆ ಎಂದು ಬೋರ್ಡ್ವೊಂದನ್ನು ತನ್ನ ಆಟೋದಲ್ಲಿ ಬರೆದು ಹಾಕಿರುವ ಆತ ಅದೇ ಖುಷಿಯಲ್ಲಿ ತನ್ನ ಆಟೋದಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕತ್ ವಿತರಿಸಿದ್ದಾನೆ.
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ “ಹೆಂಡತಿ ತನ್ನ ಹೆತ್ತವರ ಮನೆಗೆ ಹೋಗಿದ್ದಾಳೆ, ನಾನು ಸಂತೋಷವಾಗಿದ್ದೇನೆ” ಎಂದು ಬರೆಯಲಾಗಿದೆ.
Comments