ಬೆಳ್ಳಾರೆ : ಜ.04 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಸಂತ ಸಂಭ್ರಮದ ಪ್ರಯುಕ್ತ “ವಿಜೆ ವಿಖ್ಯಾತ್ ಸಾರಥ್ಯದಲ್ಲಿ ಬೆಳ್ಳಾರೆ ಉತ್ಸವ - 2025” ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಗಮಿಸಲಿರುವ “ತುಳು ಚಿತ್ರರಂಗದ ಖ್ಯಾತ ನಾಯಕ ನಟ ರೂಪೇಶ್ ಶೆಟ್ಟಿ”
- ಸಂಪಾದಕೀಯ
- Jan 3
- 1 min read
ಬೆಳ್ಳಾರೆ : ಜ.04 ರಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ವಸಂತ ಸಂಭ್ರಮದ ಪ್ರಯುಕ್ತ “ವಿಜೆ ವಿಖ್ಯಾತ್ ಸಾರಥ್ಯದಲ್ಲಿ ಬೆಳ್ಳಾರೆ ಉತ್ಸವ - 2025”
ಕಾರ್ಯಕ್ರಮಕ್ಕೆ ಅತಿಥಿಯಾಗಿ ಅಗಮಿಸಲಿರುವ “ತುಳು ಚಿತ್ರರಂಗದ ಖ್ಯಾತ ನಾಯಕ ನಟ ರೂಪೇಶ್ ಶೆಟ್ಟಿ”

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಸುಳ್ಯ ಇದರ ವಸಂತ ಸಂಭ್ರಮದ ಪ್ರಯುಕ್ತ ಜ.04 ರಂದು ಸಂಜೆ 7:00 ಗಂಟೆಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ “ವಿಜೆ ವಿಖ್ಯಾತ್ ಸಾರಥ್ಯದಲ್ಲಿ ಬೆಳ್ಳಾರೆ ಉತ್ಸವ-2025” ನಡೆಯಲಿದ್ದು, ಕಾರ್ಯಕ್ರಮದ ರಂಗನ್ನು ಹೆಚ್ಚಿಸಲು ಕಾರ್ಯಕ್ರಮದ ಅತಿಥಿಗಳಾಗಿ ತುಳು ಚಿತ್ರರಂಗದ ಖ್ಯಾತ ನಾಯಕ ನಟರಾದ ರೂಪೇಶ್ ಶೆಟ್ಟಿ ರವರು ಆಗಮಿಸಲಿದ್ದಾರೆ.
ಈ “ಬೆಳ್ಳಾರೆ ಉತ್ಸವ” ಕಾರ್ಯಕ್ರಮದಲ್ಲಿ ವಯೋಲಿನ್ ವಾದಕರಾದ ಶ್ರೀಜಿತ್ ಸರಳಾಯ, ಶ್ರೀ ಕಪಿಲೇಶ್ವರ ಚೆಂಡೆ ಮೇಳ, ಕೊಳಲು ವಾದಕರಾದ ವೀಕ್ಷಿತ್ ಕುತ್ಯಾಳ, ರಂಗ ಅರ್ಧನಾರೀಶ್ವರ ಕನ್ನಡ ಜೀವಸ್ವರ, ಗಾಯಕರಾದ ಸೌಮ್ಯ ಭಟ್ ಕಟೀಲು, ಮಿಮಿಕ್ರಿ ಆರ್ಟಿಸ್ಟ್ ಪಟ್ಟಾಭಿರಾಮ ಸುಳ್ಯ, ಶ್ರೀದೇವಿ ನೃತ್ಯಾರಾಧನಾ ಕಲಾಕೇಂದ್ರ ಪುತ್ತೂರು, ರಜತಾನಿ ಫೋಲ್ಕ್ ಡ್ಯಾನ್ಸರ್ ರಚಿತಾ ಗೌಡ, ಗಾಯಕರಾದ ವಿಷ್ಣುನಾಗ್ ಶೇಟ್, ಕಾರ್ಯಕ್ರಮ ನಿರೂಪಕರಾದ ಪ್ರಜ್ಞಾ ಒಡಿನಾಳ ಇವರುಗಳು ನೋಡುಗರಿಗೆ ಮನರಂಜನೆಯ ರಸದೌತಣವನ್ನು ಉಣಬಡಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
Comments