ಬಿಗ್ ಬಾಸ್ ಕನ್ನಡ : ತಾಯಿಯ ಹೇಳಿಕೆಯಿಂದಾದ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ತ್ರಿವಿಕ್ರಮ್
- ಸಂಪಾದಕೀಯ
- Jan 30
- 1 min read
ಬಿಗ್ ಬಾಸ್ ಕನ್ನಡ : ತಾಯಿಯ ಹೇಳಿಕೆಯಿಂದಾದ ವಿವಾದಕ್ಕೆ ಪ್ರತಿಕ್ರಿಯೆ ನೀಡಿದ ತ್ರಿವಿಕ್ರಮ್

"ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ಹನುಮಂತ ಗೆಲ್ಲಬಾರದಿತ್ತು. ಆತ ಏನೂ ಮಾಡಿಲ್ಲ. ನನ್ನ ಮಗ ಗೆಲ್ಲಬೇಕು ಎಂದಲ್ಲ, ತ್ರಿವಿಕ್ರಮ್ ಅಥವಾ ರಜತ್ ಇಬ್ಬರಲ್ಲಿ ಯಾರೇ ವಿನ್ ಆದರೂ ಖುಷಿ ಇತ್ತು" ಎಂದು ತ್ರಿವಿಕ್ರಮ್ ತಾಯಿ ಹೇಳಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣ ಆಗಿತ್ತು. ಈ ಕುರಿತು ತ್ರಿವಿಕ್ರಮ್ ಅವರು ಪ್ರತಿಕ್ರಿಯೆ ನೀಡಿದ್ದು, "ಮಗ ಗೆಲ್ಲಬೇಕು ಎಂದು ಎಲ್ಲಾ ತಾಯಂದರಿಗೂ ಇರುವ ಆಸೆ. ಈ ಆಸೆಯನ್ನೇ ನನ್ನ ತಾಯಿ ಕೂಡ ವ್ಯಕ್ತಪಡಿಸಿದ್ದಾರೆ. ಇದು ತಾಯಿ ಪ್ರೀತಿ ಅಷ್ಟೇ. ಇದನ್ನು ವಿವಾದ ಮಾಡುವ ವಿಚಾರ ಎನೂ ಇಲ್ಲ" ಎಂದು ಹೇಳಿದ್ದಾರೆ.
Comentarios