ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿದ್ದ ಅಭಿಮಾನಿ...!
- ಸಂಪಾದಕೀಯ
- Feb 11
- 1 min read
Updated: Feb 12
ಸಂಜಯ್ ದತ್ ಹೆಸರಿಗೆ 72 ಕೋಟಿ ರೂ. ಆಸ್ತಿ ಬರೆದಿದ್ದ ಅಭಿಮಾನಿ...!

ಸಂಜಯ್ ದತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯುಸಿ ಇದ್ದಾರೆ. ಅವರ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು 135ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ನಲ್ಲಿ ಅವರು ದೊಡ್ಡ ಮಟ್ಟದ ಹೆಸರು ಮಾಡಿದ್ದು, 2018ರಲ್ಲಿ ನಡೆದ ಒಂದು ಘಟನೆ ಅವರಿಗೆ ಇರುವ ಫ್ಯಾನ್ಸ್ ಕ್ರೇಜ್ಗೆ ಸಾಕ್ಷಿ.
2018ರಲ್ಲಿ ಸಂಜಯ್ ದತ್ ಅವರಿಗೆ ಪೊಲೀಸ್ ಠಾಣೆಯಿಂದ ಕಾಲ್ ಬಂದಿತ್ತು. ನಿಶಾ ಪಾಟಿಲ್ ಎಂಬ ಅಭಿಮಾನಿ ಅವರ 72 ಕೋಟಿ ರೂಪಾಯಿ ಆಸ್ತಿಯನ್ನು ಇವರ ಹೆಸರಿಗೆ ಬರೆದಿದ್ದರು. ನಟನಿಗೆ ಎಲ್ಲಾ ಆಸ್ತಿ ನೇರವಾಗಿ ಹಸ್ತಾಂತರ ಆಗಬೇಕು ಎಂದು ಬರೆದಿದ್ದರು. ಇದು ಅನೇಕರಿಗೆ ಅಚ್ಚರಿ ತಂದಿತ್ತು.
ಆದರೆ, ಸಂಜಯ್ ದತ್ ಅವರನ್ನು ಇದನ್ನು ಸ್ವೀಕರಿಸಿಲ್ಲ. ಅವರ ಲೀಗಲ್ ಟೀಂ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ‘ನಿಶಾ ಪಾಟೀಲ್ ಬಗ್ಗೆ ತಿಳಿದಿಲ್ಲ. ನಾನು ಅವರ ಆಸ್ತಿಯನ್ನು ಪಡೆದುಕೊಂಡಿಲ್ಲ’ ಎಂದು ಸಂಜಯ್ ದತ್ ಹೇಳಿದ್ದಾಗಿ ಸ್ಪಷ್ಟನೆ ಸಿಕ್ಕಿತ್ತು. ಈ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿತ್ತು. ಇಷ್ಟು ಡೈಹಾರ್ಡ್ ಫ್ಯಾನ್ಸ್ ಇದ್ದಾರಾ ಎಂಬ ವಿಚಾರ ತಿಳಿದು ಅನೇಕರು ಅಚ್ಚರಿಗೊಂಡಿದ್ದರು.

Comments