ಡೆಂಘಿ ಜ್ವರ : ತುಮಕೂರಿನಲ್ಲಿ 7 ವರ್ಷದ ಬಾಲಕ ಸಾವು
- ಸಂಪಾದಕೀಯ
- Feb 7
- 1 min read
ಡೆಂಘಿ ಜ್ವರ : ತುಮಕೂರಿನಲ್ಲಿ 7 ವರ್ಷದ ಬಾಲಕ ಸಾವು

ಕರ್ನಾಟಕದಲ್ಲಿ ಇದೀಗ ಡೆಂಘಿ ಜ್ವರ ಒಕ್ಕರಿಸಿಕೊಂಡಿದ್ದೂ. ತುಮಕೂರು ಜಿಲ್ಲೆಯಲ್ಲಿ ಓರ್ವ ಬಾಲಕ ಬಲಿ ಆಗಿದ್ದಾನೆ. ಜಿಲ್ಲೆಯ ಪಾವಗಡ ಪಟ್ಟಣದ ಬಾಬೈಯನ ಗುಡಿಬೀದಿಯಲ್ಲಿ ಘಟನೆ ನಡೆದಿದೆ.
ಹರೀಶ್ ಕುಮಾರ್ ಎನ್ನುವವರ ಪುತ್ರ ಕರುಣಾಕರ್(7) ಮೃತ ಬಾಲಕ.
ಪಾವಗಡದ ಸುಧಾ ಕ್ಲಿನಿಕ್ನಲ್ಲಿ ಬಾಲಕ ಕಳೆದ 8 ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಕೊನೆ ಕ್ಷಣದವರೆಗೂ ಡೆಂಘಿ ಜ್ವರ ಎಂದು ವೈದ್ಯರು ಪೋಷಕರಿಗೆ ತಿಳಿಸಿಲ್ಲ. ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡೆಂಘಿ ರೋಗದ ಲಕ್ಷಣಗಳು
ದದ್ದುಗಳು
ಕಣ್ಣು ನೋವು
ತೀವ್ರ ತಲೆನೋವು
ಹೆಚ್ಚಿನ ಜ್ವರ
ವಾಂತಿ ಮತ್ತು ವಾಕರಿಕೆಯ ಭಾವನೆ
ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು
ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿರುವ ಜನರು ವಿಶ್ರಾಂತಿ ಪಡೆಯಬೇಕು. ಜಾಸ್ತಿ ನೀರು ಹಾಗೂ ಜ್ಯೂಸ್ ಕುಡಿಯಬೇಕು. ಜ್ವರ ಮತ್ತು ದೇಹದ ನೋವಿಗೆ ಮಾತ್ರೆ ತೆಗೆದುಕೊಳ್ಳಬಹುದು. ಅಷ್ಟಾಗಿಯೂ ರೋಗಲಕ್ಷಣಗಳು ತೀವ್ರವಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.
Comments