top of page

ಕೇಂದ್ರ ಬಜೆಟ್ 2025 : ಮುಖ್ಯಾಂಶಗಳು ಇಲ್ಲಿವೆ...

ಕೇಂದ್ರ ಬಜೆಟ್ 2025 : ಮುಖ್ಯಾಂಶಗಳು ಇಲ್ಲಿವೆ...

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025-2026ರ ಆರ್ಥಿಕ ವರ್ಷಕ್ಕೆ ತಮ್ಮ ಸತತ 8ನೇ ಕೇಂದ್ರ ಬಜೆಟ್ ಅನ್ನು ಮಂಡಿಸಿದರು. ಬಜೆಟ್ ನ ಮುಖ್ಯಾಂಶಗಳು ಇಲ್ಲಿವೆ...


1) ಯುವ ಜನರಲ್ಲಿರುವ ಸೃಜನಶೀಲ ಕಲೆ ಹೊರ ತರಲು ವೈವಿಧ್ಯಮಯ ಶಿಕ್ಷಣ ನೀಡಲು 50 ಸಾವಿರ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಸ್ಥಾಪನೆ.


2) ಗ್ರಾಮೀಣ ಭಾಗದ ಶಾಲಾ-ಕಾಲೇಜು, ಆಸ್ಪತ್ರೆಗಳಿಗೆ ಭಾರತ್‌ನೆಟ್‌ ಯೋಜನೆಯಡಿ ಬ್ರಾಡ್‌ಬ್ಯಾಂಡ್‌ ಸಂಪರ್ಕ.


3) ಶಿಕ್ಷಣ ಸಂಸ್ಥೆಗಳಲ್ಲಿಎಲ್ಲಾ ಭಾರತೀಯ ಭಾಷೆಗಳ ಪುಸ್ತಕಗಳು ಡಿಜಿಟಲ್‌ ರೂಪದಲ್ಲಿ ಸಿಗುವಂತೆ ಮಾಡಲು ಭಾರತೀಯ ಭಾಷಾ ಪುಸ್ತಕ ಯೋಜನೆ.


4) ಶೈಕ್ಷಣಿಕ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(ಎಐ) ಕೇಂದ್ರ ಸ್ಥಾಪಿಸಲು 500 ಕೋಟಿ ರೂ. ಅನುದಾನ.


5) ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ‘ಮೇಕ್‌ ಫಾರ್‌ ಇಂಡಿಯಾ, ಮೇಕ್‌ ಫಾರ್‌ ವರ್ಲ್ಡ್’ ಉಪಕ್ರಮ ಯೋಜನೆಗೆ ಐದು ರಾಷ್ಟ್ರೀಯ ಕೇಂದ್ರ ಸ್ಥಾಪನೆ.


6) ನಗರ ಪ್ರದೇಶದ ಜನರ ಬದುಕು ಸುಧಾರಣೆಗೆ 1 ಲಕ್ಷ ಕೋಟಿ ರೂ. ಅನುದಾನ. ನಗರ ಪುನರುತ್ಥಾನ, ನೀರು ಸಂರಕ್ಷಣೆ, ಒಳಚರಂಡಿ ಅಭಿವೃದ್ಧಿಗೆ ಯೋಜನೆ.


7) ಗಿಗ್‌ ಕಾರ್ಮಿಕರ ರಕ್ಷಣೆಗೆ ಉಪಕ್ರಮ. ಇ-ಶ್ರಮ ಪೋರ್ಟಲ್‌ ಮೂಲಕ ನೋಂದಣಿ, ಪಿಎಂ ಆರೋಗ್ಯ ಯೋಜನೆ ಭಾಗ್ಯ.


8) ಸರಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಅಭಿವೃದ್ಧಿ.


9) ಸರಕಾರಿ ಸ್ವಾಮ್ಯದ ಸಂಸ್ಥೆಗಳ ಆರ್ಥಿಕ ಮೌಲ್ಯಮಾಪನ ಮಾಡುವ ಮೂಲಕ ಹೊಸ ಆದಾಯದ ಮೂಲಗಳನ್ನು ಕಂಡುಕೊಳ್ಳುವುದು. ಆ ಮೂಲಕ 10 ಲಕ್ಷ ಕೋಟಿ ರೂ. ಆದಾಯ ವೃದ್ಧಿ.


10) ಪರಮಾಣು ಇಂಧನ ಯೋಜನೆಯಡಿ ಸಣ್ಣ ಮಾಡ್ಯುಲರ್‌ ರಿಯಾಕ್ಟರ್‌ ಸಂಶೋಧನೆಗೆ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸ್ಥಾಪನೆ. 2033ರೊಳಗೆ ಐದು ಸ್ವದೇಶಿ ಮಾಡ್ಯುಲರ್‌ ಕೇಂದ್ರ ಸ್ಥಾಪಿಸುವ ಗುರಿ.


11) ಬಂದರುಗಳ ಅಭಿವೃದ್ಧಿಗೆ 25 ಸಾವಿರ ಕೋಟಿ ರೂ. ನಿಧಿ ಸ್ಥಾಪನೆ. ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ ಯೋಜನೆ ಜಾರಿ. ಸರಕಾರದಿಂದ ಶೇ.49ರಷ್ಟು ಹೂಡಿಕೆ.


12) ಮುಂದಿನ 1 ದಶಕದಲ್ಲಿ4 ಕೋಟಿ ಜನರನ್ನು ಗುರಿಯಾಗಿಸಿಕೊಂಡು ಉಡಾನ್‌ ಯೋಜನೆಯಡಿ 120 ಸ್ಥಳಗಳಿಗೆ ವಿಮಾನಯಾನ ಸಂಪರ್ಕ.


13) ಪ್ರವಾಸೋದ್ಯಮ ಆಧಾರಿತ ಉದ್ಯೋಗ ಬೆಳವಣಿಗೆಗೆ ರಾಜ್ಯ ಸರಕಾರದ ಸಹಯೋಗದಲ್ಲಿ50 ಪ್ರವಾಸಿ ತಾಣಗಳ ಅಭಿವೃದ್ಧಿ.

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page