top of page

ಕೇಂದ್ರ ಬಜೆಟ್ 2025 : 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ...!

ಕೇಂದ್ರ ಬಜೆಟ್ 2025 : 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ...!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಫೆ.1) ಬಜೆಟ್ ಮಂಡಿಸುತ್ತಿದ್ದಾರೆ. ನಿರೀಕ್ಷೆಯಂತೆ ಅವರು ಮಧ್ಯಮವರ್ಗದವರ ಬೇಡಿಕೆಯನ್ನು ನೆರವೇರಿಸಿದ್ದಾರೆ. ಅದರಂತೆ 12 ಲಕ್ಷ ರೂವರೆಗಿನ ಆದಾಯ ಹೊಂದಿರುವವರು ಯಾವುದೇ ತೆರಿಗೆ ಕಟ್ಟುವ ಅವಶ್ಯಕತೆ ಇಲ್ಲ. 4 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.


ಹೊಸ ಟ್ಯಾಕ್ಸ್ ಸ್ಲಾಬ್ ದರಗಳು


0-4 ಲಕ್ಷ ರೂ: ತೆರಿಗೆ ಇಲ್ಲ

  • 4-8 ಲಕ್ಷ ರೂ: ಶೇ. 5 ತೆರಿಗೆ

  • 8-12 ಲಕ್ಷ ರೂ: ಶೇ. 10 ತೆರಿಗೆ

  • 12-16 ಲಕ್ಷ ರೂ: ಶೇ. 15 ತೆರಿಗೆ

  • 16-20 ಲಕ್ಷ ರೂ: ಶೇ. 20 ತೆರಿಗೆ

  • 20-24 ಲಕ್ಷ ರೂ: ಶೇ. 25 ತೆರಿಗೆ

  • 24 ಲಕ್ಷ ರೂ ಮೇಲ್ಪಟ್ಟು: ಶೇ. 30 ತೆರಿಗೆ


ಇಲ್ಲಿ ಸೆಕ್ಷನ್ 87ಎ ಅಡಿಯಲ್ಲಿ ರಿಬೇಟ್ ನೀಡಲಾಗುತ್ತದೆ. ಈ ಪ್ರಕಾರ 12 ಲಕ್ಷ ರುವರೆಗಿನ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ.

Comentarios


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page