top of page

ಕೇಂದ್ರ ಬಜೆಟ್ 2025 ರಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆಗಳ ಕುರಿತು ಅಂಕಿ-ಅಂಶ ಸಹಿತ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಕೇಂದ್ರ ಬಜೆಟ್ 2025 ರಲ್ಲಿ ಕರ್ನಾಟಕಕ್ಕೆ ನೀಡಿದ ಕೊಡುಗೆಗಳ ಕುರಿತು ಅಂಕಿ-ಅಂಶ ಸಹಿತ ಮಾಹಿತಿ ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ

ಧಾರವಾಡ ಸಂಸದರೂ ಆಗಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ರಾಜ್ಯದ ವಿವಿಧ ರೈಲ್ವೆ ಯೋಜನೆಗಳಿಗೆ ಕೇಂದ್ರ ಬಜೆಟ್ ನಲ್ಲಿ ನೀಡಿದ ಕೊಡುಗೆಗಳ ಕುರಿತು ಅಂಕಿ-ಅಂಶ ಸಹಿತ ಮಾಹಿತಿ ಒದಗಿಸಿದ್ದು, ಈ ಮೂಲಕ "ಕೇಂದ್ರ ಬಜೆಟ್ ಅಲ್ಲಿ ಕರ್ನಾಟಕಕ್ಕೆ ಏನು?" ಎಂದ ಕಾಂಗ್ರೆಸ್ಸಿಗರಿಗೆ ಪ್ರತ್ಯುತ್ತರ ಕೊಟ್ಟಿದ್ದಾರೆ.


1) ಯುಪಿಎ ಅವಧಿಯ 5 ವರ್ಷಗಳ ಕಾಲ ಪ್ರತಿ ವರ್ಷ ಸರಾಸರಿ 835 ಕೋಟಿ ರು. ಕೊಟ್ಟಿದ್ದರೆ, NDA ಸರ್ಕಾರ 9 ಬಾರಿ 7559 ಕೋಟಿ ರೂಪಾಯಿ ರೈಲ್ವೆ ಬಜೆಟ್ ನೀಡಿದೆ.


2) 47,016 ಕೋಟಿ ರೂಪಾಯಿ ವೆಚ್ಚದಲ್ಲಿ 3840 ಕಿ.ಮೀ.ವ್ಯಾಪ್ತಿಯ 31 ಹೊಸ ಟ್ರ್ಯಾಕ್ ಗಳ ನಿರ್ಮಾಣ ಪ್ರಗತಿಯಲ್ಲಿದೆ.


3) 61 ಅಮೃತ್ ನಿಲ್ದಾಣ: ರಾಜ್ಯದ ಪ್ರಮುಖ ಮಾರ್ಗಗಳಲ್ಲಿ ಬರುವ ಒಟ್ಟು 61 ಕಡೆ ಅಮೃತ್ ರೈಲು ನಿಲ್ದಾಣಗಳನ್ನಾಗಿ ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕಾಗಿ 1981 ಕೋಟಿ ರೂಪಾಯಿ ನೀಡಲಾಗಿದೆ.


4) ರಾಜ್ಯದ 12 ಜಿಲ್ಲೆಗಳನ್ನು ಹಾದು ಹೋಗುವ ಮಾರ್ಗದಲ್ಲಿ 18 ವಿಶಿಷ್ಟ ನಿಲ್ದಾಣಗಳಲ್ಲಿ ನಿಲುಗಡೆಯೊಂದಿಗೆ 10 ವಂದೇ ಭಾರತ್ ರೈಲುಗಳನ್ನು ಓಡಿಸಲಾಗುತ್ತಿದೆ.


5) ಎಲ್ಲೆಲ್ಲಿ ಅಮೃತ್ ನಿಲ್ದಾಣ : ಆಲಮಟ್ಟಿ, ಅಳ್ನಾವರ, ಅರಸೀಕೆರೆ ಜಂಕ್ಷನ್, ಬಾದಾಮಿ, ಬಾಗಲಕೋಟೆ, ಬಳ್ಳಾರಿ, ಬೆಂಗಳೂರು ಕ್ಯಾಂಟ್, ಬಂಗಾರಪೇಟೆ, ಬಂಟವಾಳ, ಬೆಳಗಾವಿ, ಬೀದರ್, ವಿಜಾಪುರ, ಚಾಮರಾಜ ನಗರ, ಚನ್ನಪಟ್ಟಣ, ಚನ್ನಸಂದ್ರ, ಚಿಕ್ಕಮಗಳೂರು, ಚಿಕ್ಕೋಡಿ ರಸ್ತೆ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ದೊಡ್ಡಬಳ್ಳಾಪುರ, ಗದಗ, ಘಟಪ್ರಭಾ, ಗೋಕಾಕ ರಸ್ತೆ, ಗುಬ್ಬಿ, ಹರಿಹರ, ಹಾಸನ, ಹೊಸಪೇಟೆ, ಕಲಬುರಗಿ ಜೂ (ಗುಲ್ಬರ್ಗ).


6) ಮುಂದುವರಿಯುತ್ತಾ, ಕೆಂಗೇರಿ, ಕೊಪ್ಪಳ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಬೆಂಗಳೂರು ನಿಲ್ದಾಣ), ಕೃಷ್ಣರಾಜಪುರ, ಮಲ್ಲೇಶ್ವರಂ, ಮಾಲೂರು, ಮಂಡ್ಯ, ಮಂಗಳೂರು ಸೆಂಟ್ರಲ್, ಮಂಗಳೂರು ಜೂ. ಮುನಿರಾಬಾದ್, ಮೈಸೂರು ಜಂಕ್ಷನ್ (ಮೈಸೂರು), ರಾಯಬಾಗ್, ರಾಯಚೂರು ಜಂಕ್ಷನ್, ರಾಮನಗರ, ರಾಣಿಬೆನ್ನೂರು, ಸಾಗರ ಜಂಬಗಾರು, ಸಕಲೇಶಪುರ, ಶಹಾಬಾದ್, ಶಿವಮೊಗ್ಗ ಪಟ್ಟಣ, ಶ್ರವಣಬೆಳಗೊಳ, ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್. ಸುಬ್ರಹ್ಮಣ್ಯ ರಸ್ತೆ, ತಾಳಗುಪ್ಪ, ತಿಪಟೂರು, ತುಮಕೂರು, ಉಡುಪಿ, ವಾಡಿ, ವೈಟ್‌ಫೀಲ್ಡ್, ಯಾದಗಿರಿ, ಯಶವಂತಪುರ.


7) ರಾಜ್ಯದಲ್ಲಿ 2014ರ ನಂತರದಲ್ಲಿ 1652 ಕಿ.ಮೀ. ಹೊಸ ಟ್ರ್ಯಾಕ್ ಗಳನ್ನು ನಿರ್ಮಿಸಲಾಗಿದೆ. ಶ್ರೀಲಂಕಾದ ಒಟ್ಟಾರೆ ರೈಲು ಮಾರ್ಗಕ್ಕೆ ಹೋಲಿಸಿದರೆ ನಮ್ಮ ರಾಜ್ಯದ ಹೊಸ ಟ್ರ್ಯಾಕ್ ಹೆಚ್ಚಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ 113 ಟ್ರ್ಯಾಕ್ ನಿರ್ಮಿಸಿದ್ರೆ, NDA ಸರ್ಕಾರ 150 ಹೊಸ ಟ್ರ್ಯಾಕ್ ನಿರ್ಮಿಸಿದೆ.


8) ಶೇ.96.5 ಮಾರ್ಗ ವಿದ್ಯುದ್ದೀಕರಣ: ರಾಜ್ಯದ ಶೇ.96.5ರಷ್ಟು ರೈಲು ಮಾರ್ಗ ವಿದ್ಯುದ್ದೀಕರಣಗೊಂಡಿದೆ. ಒಟ್ಟಾರೆ 3233 ಕೀ.ಮೀ.ವ್ಯಾಪ್ತಿಯ 294 ರೈಲು ಮಾರ್ಗವನ್ನು ವಿದ್ಯುದ್ದೀಕರಣಗೊಳಿಸಲಾಗಿದೆ. ಯುಪಿಎ ಅವಧಿಯಲ್ಲಿ ಕೇವಲ 18 ಮಾರ್ಗ ಆಗಿದ್ದರೆ, ಈಗಿದರ 16 ಪಟ್ಟು ಹೆಚ್ಚಾಗಿದೆ.


9) ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಅನುೂಲಕ್ಕಾಗಿ 61 ಕಡೆ ಲಿಫ್ಟ್, 43 ಕಡೆ ಎಸ್ಕಲೇಟರ್ ಹಾಗೂ 335 ನಿಲ್ದಾಣಗಳಲ್ಲಿ ವೈಫೈ ವ್ಯವಸ್ಥೆ ಕಲ್ಪಿಸಲಾಗಿದೆ.


10) 1,240 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದ 4 ಪ್ರಮುಖ ನಿಲ್ದಾಣಗಳನ್ನು ಪುನರ್ ಅಭಿವೃದ್ಧಿಪಡಿಸುತ್ತಿದೆ.


11) 475 ಕೋಟಿ ವೆಚ್ಚದಲ್ಲಿ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ.


12) 367 ಕೋಟಿ ರೂಪಾಯಿ ವೆಚ್ಚದಲ್ಲಿ ಯಶವಂತಪುರ ನಿಲ್ದಾಣ.


13) 300 ಕೋಟಿ ವೆಚ್ಚದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.


14) ತುಮಕೂರು ನಿಲ್ದಾಣ ಕಾಮಗಾರಿಗೆ (88 ಕೋಟಿ ರೂ.) ಟೆಂಡರ್ ಕರೆಯಲಾಗಿದೆ.

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page