ಅಂಗನವಾಡಿಯಲ್ಲಿ ಬಿರಿಯಾನಿ, ಚಿಕನ್ ಫ್ರೈ ಕೊಡಬೇಕೆಂದು ಮನವಿ ಮಾಡಿದ ಪುಟ್ಟ ಬಾಲಕ...!
- ಸಂಪಾದಕೀಯ
- Feb 4
- 1 min read
ಅಂಗನವಾಡಿಯಲ್ಲಿ ಬಿರಿಯಾನಿ, ಚಿಕನ್ ಫ್ರೈ ಕೊಡಬೇಕೆಂದು ಮನವಿ ಮಾಡಿದ ಪುಟ್ಟ ಬಾಲಕ...!

ಕೇರಳದ ಶಂಕು(ರಿಜುಲ್ ಎಸ್. ಸುಂದರ್) ಎಂಬ ಪುಟ್ಟ ಬಾಲಕ ಉಪ್ಪಿಟ್ಟು ಬೇಡ ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಚಿಕನ್ ಫ್ರೈ ಕೊಡಬೇಕೆಂದು ತಾಯಿಯ ಬಳಿ ಹೇಳಿದ್ದಾನೆ. ಈತನ ಮುದ್ದಾದ ಬೇಡಿಕೆಯ ವಿಡಿಯೋವನ್ನು ಆತನ ತಾಯಿ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇದಕ್ಕೆ ಪ್ರತಿಕ್ರಿಯಿಸಿದ ಕೇರಳದ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಪುಟ್ಟ ಬಾಲಕನ ಬೇಡಿಕೆಯನ್ನು ಪರಿಗಣನೆಗೆ ತೆಗೆದುಕೊಂಡು, ಶಂಕುವಿಗಾಗಿ ಅಂಗನವಾಡಿಯ ಮೆನುವನ್ನು ಮಾರ್ಪಾಡು ಮಾಡಲಾಗುವುದು ಎಂದು ಭರವಸೆಯನ್ನು ನೀಡಿದ್ದಾರೆ.
ಈ ಕುರಿತ ವಿಡಿಯೋವನ್ನು ವೀಣಾ ಜಾರ್ಜ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಶುಂಕುವಿನ ಮನವಿಯನ್ನು ಪರಿಗಣಿಸಿ, ಅಂಗನವಾಡಿ ಮೆನು ಮಾರ್ಪಾಡು ಕುರಿತು ಚರ್ಚಿಸಲಾಗುವುದು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Comentarios