ಮದ್ದುಗುಂಡುಗಳ ತಯಾರಿಕೆಯಲ್ಲಿ ಭಾರತ ಶೇ. 88ರಷ್ಟು ಸ್ವಾವಲಂಬನೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್
- ಸಂಪಾದಕೀಯ
- Feb 27
- 1 min read
ಮದ್ದುಗುಂಡುಗಳ ತಯಾರಿಕೆಯಲ್ಲಿ ಭಾರತ ಶೇ. 88ರಷ್ಟು ಸ್ವಾವಲಂಬನೆ : ರಕ್ಷಣಾ ಸಚಿವ ರಾಜನಾಥ್ ಸಿಂಗ್

ಐಐಟಿ ಮಂಡಿಯ 16ನೇ ಸಂಸ್ಥಾಪನಾ ದಿನಾಚರಣೆಯ ವೇಳೆ ಮಾತನಾಡುತ್ತಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತಕ್ಕೆ ಅಗತ್ಯವಾಗಿರುವ ಮದ್ದುಗುಂಡುಗಳನ್ನು ಬಹುತೇಕ ಭಾರತದಲ್ಲೇ ತಯಾರಿಸಲಾಗುತ್ತಿದೆ ಎಂದಿದ್ಧಾರೆ. ಅವರ ಪ್ರಕಾರ ಮದ್ದುಗುಂಡು ತಯಾರಿಕೆಯಲ್ಲಿ ಭಾರತ ಶೇ. 88ರಷ್ಟು ಸ್ವಾವಲಂಬನೆ ಸಾಧಿಸಿದೆ. ಅಂದರೆ, ಭಾರತಕ್ಕೆ ಅಗತ್ಯವಾಗಿರುವ ಶೇ. 88ರಷ್ಟು ಮದ್ದುಗುಂಡುಗಳನ್ನು ದೇಶೀಯವಾಗಿ ತಯಾರಿಸಲಾಗುತ್ತಿದೆ.
2023-24ರಲ್ಲಿ ರಕ್ಷಣಾ ವಸ್ತುಗಳ ರಫ್ತು ಪ್ರಮಾಣ 23,000 ಕೋಟಿ ರೂ ಆಗಿದೆ. 2029ರೊಳಗೆ ರಫ್ತು 50,000 ಕೋಟಿ ರೂಗೆ ಏರಿಸುವ ಗುರಿ ಇದೆ ಎಂದಿದ್ದಾರೆ.
ಎಐ ಸಮರತಂತ್ರ, ಸೈಬರ್ ಸೆಕ್ಯೂರಿಟಿ, ದೇಶೀಯ ಎಐ ಚಿಪ್ ತಯಾರಿಕೆ, ಕ್ವಾಂಟಮ್ ತಂತ್ರಜ್ಞಾನ ಇತ್ಯಾದಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹೆಚ್ಚಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಐಐಟಿ ಮಂಡಿ ಇತ್ಯಾದಿ ಶಿಕ್ಷಣ ಸಂಸ್ಥೆಗಳು ಕಾರ್ಯೋನ್ಮುಖವಾಗಬೇಕೆಂದು ಸಚಿವರು ಕರೆ ನೀಡಿದ್ದಾರೆ.

Comments