ಹೆಚ್.ಎಂ.ಪಿ.ವಿ ವೈರಸ್ : ಆತಂಕಪಡುವ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ-ಜ್ವರ ಸಾಮಾನ್ಯ...
- ಸಂಪಾದಕೀಯ
- Jan 8
- 1 min read
ಹೆಚ್.ಎಂ.ಪಿ.ವಿ ವೈರಸ್ : ಆತಂಕಪಡುವ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ-ಜ್ವರ ಸಾಮಾನ್ಯ...

ಮಂಗಳೂರು: "ಹವಾಮಾನ ಬದಲಾವಣೆಯ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೀತ, ಜ್ವರ ಪ್ರಕರಣ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕಳೆದ ಕೆಲವು ದಿನಗಳಿಂದ ಬೆಳಗ್ಗಿನ ಜಾವ ಚಳಿ ಆರಂಭಗೊಂಡಿದ್ದು, ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿಕೊಳ್ಳುವ ಅಗತ್ಯ ಇದೆ. ಹವಾಮಾನ ಬದಲಾದಾಗ ಸಾಂಕ್ರಾಮಿಕ ರೋಗಗಳು ಸಾಮಾನ್ಯ. ಚೀನದಲ್ಲಿ ಉಲ್ಬಣಿಸಿರುವ ಹ್ಯೂಮನ್ ಮೆಟಾನ್ಯುಮೊ ವೈರಸ್ (ಹೆಚ್.ಎಂ.ಪಿ.ವಿ) ಬಗ್ಗೆ ಸದ್ಯಕ್ಕೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಇದರಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಇರುವುದಿಲ್ಲ, ಮಾರಣಾಂತಿಕವೂ ಅಲ್ಲವಾದ್ದರಿಂದ ಗಾಬರಿಪಡುವ ಅಗತ್ಯವಿಲ್ಲ. ಸದ್ಯಕ್ಕೆ ದ.ಕ. ಜಿಲ್ಲೆಯಲ್ಲಿ ಈ ವೈರಸ್ ತಳಿ ಕಾಣಿಸಿಕೊಂಡಿಲ್ಲ. ಇದೇ ಕಾರಣಕ್ಕೆ ವಿಶೇಷ ನಿಗಾವಣೆ ಸದ್ಯಕ್ಕಿಲ್ಲ. ಹವಾಮಾನ ಬದಲಾವಣೆಯ ಮೇಲೆ ಸಾಮಾನ್ಯವಾಗಿ ವೈರಸ್ ಹರಡುವಿಕೆ ಇರುತ್ತದೆ." ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ಅವರು ತಿಳಿಸಿದ್ದಾರೆ.
Comentarios