ಲಕ್ಷ ಲಕ್ಷ ಸಂಬಳ ಬರುವ ಏರೋಸ್ಪೇಸ್ ಇಂಜಿನಿಯರಿಂಗ್ ಕೆಲಸ ಬಿಟ್ಟು ಸನ್ಯಾಸಿ ಆದ ವ್ಯಕ್ತಿ
- ಸಂಪಾದಕೀಯ
- Jan 16
- 1 min read
ಲಕ್ಷ ಲಕ್ಷ ಸಂಬಳ ಬರುವ ಏರೋಸ್ಪೇಸ್ ಇಂಜಿನಿಯರಿಂಗ್ ಕೆಲಸ ಬಿಟ್ಟು ಸನ್ಯಾಸಿ ಆದ ವ್ಯಕ್ತಿ

ವಿಶ್ವದ ಅತಿದೊಡ್ಡ ಧಾರ್ಮಿಕ ಉತ್ಸವ ಮಹಾ ಕುಂಭಮೇಳವು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಿದೆ, 12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಕುಂಭಮೇಳದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ವಿಶ್ವದ ಶ್ರೀಮಂತ ಮಹಿಳೆಯರಲ್ಲಿ ಒಬ್ಬರಾದ ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ಸ್ ಕೂಡ ಮಹಾಕುಂಭದಲ್ಲಿ ಭಾಗಿಯಾಗಿದ್ದಾರೆ. ವಿಶೇಷತೆ ಏನೆಂದರೆ ಸಾಕಷ್ಟು ಜನರು ತಮ್ಮ ಐಷಾರಾಮಿ ಜೀವನವನ್ನು ತೊರೆದು ಆಧ್ಯಾತ್ಮದ ಮಾರ್ಗದೆಡೆಗೆ ಮುಖ ಮಾಡುತ್ತಿದ್ದಾರೆ. ಇದೀಗ ಇದೇ ರೀತಿ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡ ಏರೋಸ್ಪೇಸ್ ಇಂಜಿನಿಯರ್ ಒಬ್ಬರ ಕಥೆ ಎಲ್ಲೆಡೆ ಸದ್ದು ಮಾಡುತ್ತಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಬಾಂಬೆಯಲ್ಲಿ ನಾಲ್ಕು ವರ್ಷಗಳ ಕಾಲ ಏರೋಸ್ಪೇಸ್ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದ ಅಭಯ್ ಸಿಂಗ್ ಈಗ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ತಿಂಗಳಿಗೆ ಲಕ್ಷ ಲಕ್ಷ ಸಂಬಳ ಬರುವ ಕೆಲಸವನ್ನು ತೊರೆದು ಆಧ್ಯಾತ್ಮದ ಮಾರ್ಗದೆಡೆಗೆ ನಡೆದಿದ್ದಾರೆ. ಮಹಾಕುಂಭಮೇಳದಲ್ಲಿ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಇವರು ಆಧ್ಯಾತ್ಮದ ಮೂಲಕ ಜೀವನದ ಅರ್ಥವನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಾರಂಭದಲ್ಲಿ ಎಂಜಿನಿಯರಿಂಗ್ ತೊರೆದು 4 ವರ್ಷಗಳ ಕಾಲ ಮುಂಬೈನಲ್ಲಿ ಫೋಟೋಗ್ರಫಿ ಶುರುಮಾಡಿದ್ದ ಅಭಯ್ ಸಿಂಗ್ ಟ್ರಾವೆಲ್ ಫೋಟೋಗ್ರಫಿಯಲ್ಲಿ ವೃತ್ತಿಪರ ಕೋರ್ಸ್ ಮಾಡುತ್ತಾ ಮುಂದೆ ಕೋಚಿಂಗ್ ಸೆಂಟರ್ ತೆಗೆದು ಮಕ್ಕಳಿಗೆ ಭೌತಶಾಸ್ರ್ರ ಪಾಠ ಹೇಳಿಕೊಡುತ್ತಿದ್ದರು.
ಇದೀಗ ಕೆಲ ವರ್ಷಗಳಿಂದ ಐಷಾರಾಮಿ ಆಡಂಬರ ಜೀವನ ಹಾಗೂ ಪ್ರಾಪಂಚಿಕ ಸಂತೋಷಗಳನ್ನು ಅಭಯ್ ಸಿಂಗ್ ತ್ಯಜಿಸಿದ್ದಾರೆ. "ಮೋಕ್ಷಕ್ಕೆ ಇದೇ ದಾರಿ ಅಂದುಕೊಂಡು, ಹಣ ಮುಖ್ಯವಲ್ಲ, ನೆಮ್ಮದಿ ಬಹಳ ಮುಖ್ಯ ಎಂದು ನನ್ನ ಆಸಕ್ತಿಯನ್ನು ಆಧ್ಯಾತ್ಮಿಕತೆಯ ಕಡೆಗೆ ತಿರುಗಿಸಿದ್ದಾರೆ. ತನ್ನ ಇನ್ನುಳಿದ ಜೀವನವನ್ನು ಆಧ್ಯಾತ್ಮಿಕತೆಗೆ ಮುಡಿಪಾಗಿರಿಸಿಕೊಳ್ಳುತ್ತೇನೆ" ಎಂದು ಹೇಳಿಕೊಂಡಿದ್ದಾರೆ.
Comments