ಪ್ರಧಾನಿ ಮೋದಿ "ಫಿಟ್ ಇಂಡಿಯಾ" ಕರೆಗೆ ಸಿನಿಮಾ ನಟರು, ವೈದ್ಯರು, ಕ್ರೀಡಾಪಟುಗಳ ಬೆಂಬಲ
- ಸಂಪಾದಕೀಯ
- Feb 1
- 1 min read
ಪ್ರಧಾನಿ ಮೋದಿ "ಫಿಟ್ ಇಂಡಿಯಾ" ಕರೆಗೆ ಸಿನಿಮಾ ನಟರು, ವೈದ್ಯರು, ಕ್ರೀಡಾಪಟುಗಳ ಬೆಂಬಲ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಬೊಜ್ಜಿನ ವಿರುದ್ಧ ಹೋರಾಡಲು ಮತ್ತು ಎಣ್ಣೆ ಅಂಶವಿರುವ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಲು ಕರೆ ನೀಡಿದ್ದರು. ಇದಕ್ಕೆ ನಟರು, ವೈದ್ಯರು, ಕ್ರೀಡಾಪಟುಗಳಿಂದ ವ್ಯಾಪಕ ಬೆಂಬಲ ದೊರೆತಿದೆ. ಡೆಹ್ರಾಡೂನ್‌ನಲ್ಲಿ ನಡೆದ 38ನೇ ರಾಷ್ಟ್ರೀಯ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದ ಪ್ರಧಾನಿ ಮೋದಿ 'ದೇಶದಲ್ಲಿ ಬೊಜ್ಜಿನ ಸಮಸ್ಯೆ ಹೇಗೆ ವೇಗವಾಗಿ ಹೆಚ್ಚುತ್ತಿದೆ. ಬೊಜ್ಜಿನ ಸಮಸ್ಯೆ ಕಳವಳಕಾರಿ ವಿಷಯವಾಗಿದೆ. ಏಕೆಂದರೆ ಬೊಜ್ಜು ಮಧುಮೇಹ, ಹೃದಯ ಕಾಯಿಲೆಯಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ' ಎಂದಿದ್ದರು.
ಈ ವೇಳೆ "ಫಿಟ್ ಇಂಡಿಯಾ" ಆಂದೋಲನದ ಬಗ್ಗೆ ಮಾತನಾಡಿದ ಮೋದಿ 'ಸಮತೋಲಿತ ಸೇವನೆ ಮಾಡಿ, ವ್ಯಾಯಾಮ ಮತ್ತು ಆಹಾರದ ಮಹತ್ವ ತಿಳಿದುಕೊಳ್ಳಿ' ಎಂದಿದ್ದರು. ಆಹಾರದಲ್ಲಿ ಅನಾರೋಗ್ಯಕರ ಕೊಬ್ಬು ಮತ್ತು ಎಣ್ಣೆಯನ್ನು ಕಡಿಮೆ ಮಾಡುವ ಮಹತ್ವವನ್ನು ಅವರು ಒತ್ತಿ ಹೇಳಿದ್ದರು. ದೈನಂದಿನ ಎಣ್ಣೆ ಸೇವನೆಯನ್ನು 10% ಕಡಿಮೆ ಮಾಡುವ ಕುರಿತು ಸಲಹೆ ನೀಡಿದ್ದರು.
ಪ್ರಧಾನಿ ಮೋದಿಯವರ ಈ ಸಲಹೆಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ವೈದ್ಯರು, ಕ್ರೀಡಾಪಟುಗಳು ಬೆಂಬಲ ಸೂಚಿಸಿದ್ದಾರೆ.
Comentarios