top of page

ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯ ರಶ್ಮಿ ; ಕಾದಿದ್ಯಾ ಗಂಡಾಂತರ...?

ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸ್ಪರ್ಶಿಸದ ಸೂರ್ಯ ರಶ್ಮಿ ; ಕಾದಿದ್ಯಾ ಗಂಡಾಂತರ...?

ಪ್ರತಿ ಮಕರ ಸಂಕ್ರಾಂತಿ ದಿನದಲ್ಲಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಚಮತ್ಕಾರ ನಡೆಯುತ್ತದೆ. ಸಂಕ್ರಮಣ ದಿನ ಗವಿ ಗಂಗಾಧರೇಶ್ವರನನ್ನು ಸೂರ್ಯದೇವ ನಮಿಸುತ್ತಿದ್ದ. ಆದರೆ ಈ ಬಾರಿ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಿಲ್ಲ. ದೇಗುಲ ಬಲಭಾಗದ ಕಮಾನಿನಿಂದ ಕಿಟಕಿ ಮೂಲಕ ಸೂರ್ಯ ರಶ್ಮಿ ಪ್ರವೇಶ ಮಾಡಬೇಕಿತ್ತು. ಮೋಡ ಕವಿದ ವಾತಾವರಣ ಇದ್ದುದರಿಂದ ಗಂಗಾಧರೇಶ್ವರನ ಮೇಲೆ ಸೂರ್ಯರಶ್ಮಿ‌ ಸ್ಪರ್ಶ ಆಗಲಿಲ್ಲ. ಇದರಿಂದ ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆ ಉಂಟುಮಾಡಿದೆ. ಈ ವರ್ಷ ಸೇರಿ ಇತಿಹಾಸದಲ್ಲೇ 3ನೇ ಬಾರಿಗೆ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬೀಳದಂತೆ ಆಗಿದೆ.

ಒಂದು ವೇಳೆ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶಯಾಗಿದ್ದರೇ, ಗವಿಗಂಗಾಧರನಿಗೆ ನಮಿಸಿ ಪಥವನ್ನು ಸೂರ್ಯದೇವ ಬದಲಿಸುತ್ತಿದ್ದ. ಇದಾದ ಬಳಿಕ ಸೂರ್ಯ ದಕ್ಷಿಣ ಪಥದಿಂದ ಉತ್ತರಕ್ಕೆ ಪಥ ಸಂಚಲನ ಮಾಡುವಾಗ ಸೂರ್ಯ ಕಿರಣಗಳು ದೇವಾಲಯದಲ್ಲಿನ ಶಿವ ಲಿಂಗವನ್ನು ಸ್ಪರ್ಶಿಸುತ್ತಿದ್ದ. ಹೀಗಾಗಿಯೇ ಇಂದು ಗವಿಗಂಗಾಧರ ದೇವಸ್ಥಾನದ ಶಿವಲಿಂಗಕ್ಕೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗುತ್ತಿತ್ತು. ಇಂದು ಬೆಳ್ಳಗ್ಗೆ 5 ಗಂಟೆಗೆ ಪೂಜೆ ಆರಂಭವಾಗಿದ್ದು ಪುಷ್ಪಾಭಿಷೇಕ, ಮಹಮಂಗಳಾರತಿ‌, ಪಂಚಾಭೀಷೇಕ ಮಾಡಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಸೂರ್ಯರಶ್ಮಿ‌ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ.

ಸೂರ್ಯ ರಶ್ಮಿ ಸ್ಪರ್ಶಿಸುವುದನ್ನು ಕಣ್ತುಂಬಿಕೊಳ್ಳಲು ಗವಿಗಂಗಾಧರ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಹೀಗಾಗಿ ಭಕ್ತರಿಗಾಗಿ LED ಸ್ಕ್ರೀನ್ ಕೂಡ ಹಾಕಲಾಗಿತ್ತು. ಸೂರ್ಯರಶ್ಮಿ‌ ಸ್ಪರ್ಶವಾಗುವುದನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಭಕ್ತರು ಕಾಯುತ್ತಿದ್ದರು.


ಕಾದಿದ್ಯಾ ಗಂಡಾಂತರ...? : ಗವಿಗಂಗಾಧರ ದೇವಸ್ಥಾನಕ್ಕೆ ಬಾರದೇ ಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶಿಸಲಿಲ್ಲ. ಪ್ರತೀ ವರ್ಷ ಸೂರ್ಯ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ಸಂದರ್ಭದಲ್ಲಿ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗ್ತಿತ್ತು. ಸೂರ್ಯನ ಕಿರಣ ಎಷ್ಟು ಹೊತ್ತು ಇರುತ್ತೆ ಎನ್ನುವ ಆಧಾರದಲ್ಲಿ ಅರ್ಚಕರು ಭವಿಷ್ಯ ಹೇಳುತ್ತಿದ್ದರು. ಕೋವಿಡ್ ಮೊದಲು ಅತ್ಯಲ್ಪ ಅವಧಿಯಲ್ಲಿ ಸೂರ್ಯನ ಕಿರಣ ಸ್ಪರ್ಶವಾಗಿತ್ತು. ಇದರಿಂದ ದೀಕ್ಷಿತರು, ಅಪಾರ ಸಾವು ನೋವಿನ ಎಚ್ಚರಿಕೆ ನೀಡಿದ್ದರು. ಭವಿಷ್ಯದಂತೆ ಕೊರೋನಾ ಮಹಾಮಾರಿ ಅಪ್ಪಳಿಸಿ ಅಪಾರ ಸಾವು ನೋವುಗಳು ಸಂಭವಿಸಿದ್ದವು. ಈ ಬಾರಿಯೂ ಸಹ ಸೂರ್ಯರಶ್ಮಿ ಸ್ಪರ್ಶಿಸದ ಹಿನ್ನೆಲೆಯಲ್ಲಿ ಮುಂದೆ ಗಂಡಾಂತರ ಕಾದಿದ್ಯಾ ಎನ್ನುವ ಆತಂಕ ಶುರುವಾಗಿದೆ.

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page