ಗೃಹ ಲಕ್ಷ್ಮೀ ಯೋಜನೆಯ 3 ತಿಂಗಳ ಬಾಕಿ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ : ಭರವಸೆ ನೀಡಿದ ಡಿ.ಸಿ.ಎಂ ಡಿ.ಕೆ ಶಿವಕುಮಾರ್
- ಸಂಪಾದಕೀಯ

- Feb 17
- 1 min read
ಗೃಹ ಲಕ್ಷ್ಮೀ ಯೋಜನೆಯ 3 ತಿಂಗಳ ಬಾಕಿ ಹಣ ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ : ಭರವಸೆ ನೀಡಿದ ಡಿ.ಸಿ.ಎಂ ಡಿ.ಕೆ ಶಿವಕುಮಾರ್

ಗೃಹ ಲಕ್ಷ್ಮೀ ಯೋಜನೆಯ 3 ತಿಂಗಳ ಬಾಕಿ ಹಣ ಶೀಘ್ರದಲ್ಲೇ ಫಲಾನುಭವಿಗಳ ಅಕೌಂಟಿಗೆ ಹಾಕಲಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದರು.
ಕೆಲವು ತಿಂಗಳಿಂದ ಅನ್ನಭಾಗ್ಯ ಅಕ್ಕಿ ಹಣ ಹಾಗೂ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಕೇಳಿದಾಗ “ಮೂರು ತಿಂಗಳಿಂದ ಬಂದಿಲ್ಲ. ಈ ಹಣವನ್ನು ನಾವು ಹಾಕುತ್ತೇವೆ. ನಾವು ಕೊಟ್ಟ ಮಾತಿನಂತೆ ನಡೆಯುತ್ತೇವೆ” ಎಂದು ತಿಳಿಸಿದರು.

Comments