ಹನುಮಂತ-ಧನರಾಜ್ ಗೆಳೆತನಕ್ಕೆ ಶುಭ ಹಾರೈಸಿದ ಐಶ್ವರ್ಯಾ ಶಿಂಧೋಗಿ
- ಸಂಪಾದಕೀಯ
- Jan 31
- 1 min read
ಹನುಮಂತ-ಧನರಾಜ್ ಗೆಳೆತನಕ್ಕೆ ಶುಭ ಹಾರೈಸಿದ ಐಶ್ವರ್ಯಾ ಶಿಂಧೋಗಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಹನುಮಂತ ಹಾಗೂ ಧನರಾಜ್ ಅವರ ಗೆಳೆತನ ಗಮನ ಸೆಳೆದಿದೆ. ಇಬ್ಬರೂ ತುಂಬಾನೇ ಕ್ಲೋಸ್ ಆಗಿದ್ದರು. ಇವರ ಗೆಳೆತನ ಕಂಡು ಐಶ್ವರ್ಯಾ ಶಿಂಧೋಗಿ ಅವರು ಫಿದಾ ಆಗಿದ್ದು, ಅವರು ಗೆಳೆತನಕ್ಕೆ ಶುಭ ಹಾರೈಸಿದ್ದಾರೆ. "ಹನುಮಂತು ವ್ಯಕ್ತಿತ್ವ, ಧನರಾಜ್ ಮಾತು, ಹಾಲು ಸಕ್ಕರೆ ಇದ್ದಂಗೆ. ಇಬ್ಬರ ಸ್ನೇಹ ಹೀಗೆ ಇರಲಿ" ಎಂದು ಐಶ್ವರ್ಯಾ ಹಾರೈಸಿದ್ದಾರೆ. ಈ ವೇಳೆ ಅವರು ಹನುಮಂತ ಹಾಗೂ ಧನರಾಜ್ ಜೊತೆ ಇರುವ ಫೊಟೋಗಳನ್ನು ಹಂಚಿಕೊಂಡಿದ್ದಾರೆ. ಐಶ್ವರ್ಯಾ, ಧನರಾಜ್, ಹನುಮಂತ ಮೊದಲಾದವರಿಗೆ ಈಗಾಗಲೇ ‘ಬಾಯ್ಸ್ vs ಗರ್ಲ್ಸ್ ಶೋ' ಕಡೆಯಿಂದ ಆಫರ್ ಬಂದಿದ್ದು, ಅದರ ಶೂಟಿಂಗ್ ಕೂಡ ಆಗಿದೆ. ಇತ್ತೀಚೆಗೆ ಈ ಶೋನ ಶೂಟ್ ನಡೆದಿದೆ. ವೀಕೆಂಡ್ನಲ್ಲಿ ಎಪಿಸೋಡ್ ಪ್ರಸಾರ ಕಾಣಲಿದೆ.
コメント