ಫೆಬ್ರವರಿಯಲ್ಲೇ 33 ಡಿಗ್ರಿ ಉಷ್ಣಾಂಶ ; ದಿಢೀರ್ ತಾಪಮಾನ ಬದಲಾವಣೆಯಿಂದ ಹೆಚ್ಚಿದ ಸಮಸ್ಯೆ...!!
- ಸಂಪಾದಕೀಯ

- Feb 17
- 1 min read
ಫೆಬ್ರವರಿಯಲ್ಲೇ 33 ಡಿಗ್ರಿ ಉಷ್ಣಾಂಶ ; ದಿಢೀರ್ ತಾಪಮಾನ ಬದಲಾವಣೆಯಿಂದ ಹೆಚ್ಚಿದ ಸಮಸ್ಯೆ...!!

ಚಳಿಗಾಲದಲ್ಲಿಯೇ ತಾಪಮಾನ ದಿಢೀರ್ ಏರಿಕೆ ಕಂಡಿದೆ. ಕಳೆದ 10 ದಿನಗಳಿಂದ 31 ಡಿಗ್ರಿಗೂ ಹೆಚ್ಚು ತಾಪಮಾನ ದಾಖಲಾಗುತ್ತಿದ್ದು, ಕೃಷಿ, ತೋಟಗಾರಿಕೆ ಬೆಳೆಗಳು ಮಾತ್ರವಲ್ಲದೆ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.
ಈ ವರ್ಷ ಚಳಿಗಾಲದ ತಿಂಗಳಾದ ಫೆಬ್ರವರಿಯಲ್ಲಿಯೇ ದಾಖಲೆಯ ತಾಪಮಾನ ದಾಖಲಾಗುತ್ತಿದೆ. ಜನವರಿ ತಿಂಗಳಿಂದ ಚಳಿಯ ನಡುವೆ ತಾಪಮಾನ ಕಡಿಮೆ ಇತ್ತು. ಆದರೆ ಪ್ರಸುತ್ತ ವಾತಾವರಣದಲ್ಲಿ ಒಂದಿಷ್ಟು ಬದಲಾವಣೆಯಾಗಿದ್ದು, ಮುಂಜಾನೆ ಹಾಗೂ ರಾತ್ರಿ ವೇಳೆಯಲ್ಲಿ ಚಳಿ ವಾತಾವರಣ ಇದ್ದರೂ ಕೂಡ ಬೆಳಗ್ಗೆ 10 ಗಂಟೆಯ ನಂತರ ಬಿಸಿಲು ನೆತ್ತಿ ಸುಡುತ್ತಿದೆ. ಜನ ಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಕೆಲ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಯಿದೆ.















Comments