ಕರಾವಳಿಯಲ್ಲಿ ಬಿಸಿ ಹವೆ ಹೆಚ್ಚಳ...!!
- ಸಂಪಾದಕೀಯ
- Mar 6
- 1 min read
ಕರಾವಳಿಯಲ್ಲಿ ಬಿಸಿ ಹವೆ ಹೆಚ್ಚಳ...!!

ಕರ್ನಾಟಕದಲ್ಲಿ ಮಾರ್ಚ್ 12 ರವರೆಗೂ ಒಣಹವೆ ಇರಲಿದೆ. ಗರಿಷ್ಠ ತಾಪಮಾನದಲ್ಲಿ ಭಾರೀ ಏರಿಕೆ ಆಗುತ್ತಿದ್ದು, ಕರಾವಳಿಯಲ್ಲಿ ಬಿಸಿ ಹವೆ ಹೆಚ್ಚಾಗುವ ಅಲರ್ಟ್ ನೀಡಿದೆ.
ಮುಂದಿನ 3 ದಿನಗಳ ಕಾಲ ಕರಾವಳಿಯ ದಕ್ಷಿಣ ಕನ್ನಡ , ಉಡುಪಿ, ಉತ್ತರ ಕನ್ನಡದಲ್ಲಿ ಬಿಸಿ ಪರಿಸ್ಥಿತಿ ಇರಲಿದ್ದು, ಜನರನ್ನು ಹೈರಾಣಾಗಿಸಲಿದೆ. ಉತ್ತರ ಒಳನಾಡಿನ ಬಾಗಲಕೋಟೆ ಮತ್ತು ದಕ್ಷಿಣ ಒಳನಾಡಿನ ಬೆಂಗಳೂರು, ಹಾಸನ, ಚಿಂತಾಮಣಿ ಮತ್ತು ಮಂಡ್ಯದಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಗರಿಷ್ಠ ತಾಪಮಾನ ಸಾಮಾನ್ಯವಾಗಿದೆ.
ಶಿಶುಗಳು, ವಯಸ್ಸಾದವರು ಹಾಗೂ ರೋಗಿಗಳು ಈ ಉರಿ ಬಿಸಿಲಿಗೆ ಒಡ್ಡಿಕೊಳ್ಳದೆ ಜೋಪಾನವಾಗಿರುವಂತೆ ಸೂಚಿಸಲಾಗಿದೆ. ಹೆಚ್ಚು ನೀರು, ಮಜ್ಜಿಗೆಯ ಸೇವನೆ, ತೆಳುವಾದ ಬಟ್ಟೆ ಧರಿಸುವುದು, ಬಿಸಿಲಲ್ಲಿ ತಲೆಯನ್ನು ಟೋಪಿ ಅಥವಾ ಬಟ್ಟೆಯಿಂದ ರಕ್ಷಿಸುವುದು ಕಡ್ಡಾಯವಾಗಿದೆ.

Comments