ಕವನ : ಗಾಯದ ಮೇಲೆ ಬರೆ
- ಸಂಪಾದಕೀಯ
- Jan 6
- 1 min read
ಕವನ : ಗಾಯದ ಮೇಲೆ ಬರೆ

ಮೀನಿಗೆ ನೀರೇ ಆಸರೆ,
ಮರಕೆ ಮಣ್ಣೇ ಆಸರೆ,
ಉಸಿರಿಗೆ ಗಾಳಿಯೇ ಆಸರೆ,
ಇದನ್ನರಿತೂ ಎಳೆಯ ಹೊರಟೆವು ಗಾಯದ ಮೇಲೆ ಬರೆ...!
ಪ್ರಾಣಿ-ಪಕ್ಷಿಗಳಿಗೆಲ್ಲಾ ಸಿಗದಾದವು ನೆಲೆ,
ಮಾಸುತಿದೆ ಪ್ರಕೃತಿಯ ಜೀವಕಳೆ...
‘ಅಹಂ’ ನಲ್ಲಿ ಬೀಗುವೆವು ‘ನಾನು ಸ್ವಾವಲಂಬಿ’,
ಆದರೆ ಸತ್ತಾಗಲೂ ನಾವು ಮಣ್ಣಿಗೆ ಅವಲಂಬಿ...

ಬರಹ : ಪ್ರಜ್ವಲ್ ಅಜ್ಜಾವರ
留言