"ನಾನು ಪತ್ರಕರ್ತ. ಕಾಮ್" ನೂತನ ವೆಬ್ಸೈಟ್ ಚಾನಲ್ ಡಿ.03 ರಂದು ಶ್ರೀ ಕ್ಷೇತ್ರ ಆರಿಕೋಡಿಯಲ್ಲಿ ಲೋಕಾರ್ಪಣೆ
- ಸಂಪಾದಕೀಯ
- Dec 2, 2024
- 1 min read
Updated: Dec 3, 2024
"ನಾನು ಪತ್ರಕರ್ತ. ಕಾಮ್" ನೂತನ ವೆಬ್ಸೈಟ್ ಚಾನಲ್ ಡಿ.03 ರಂದು ಶ್ರೀ ಕ್ಷೇತ್ರ ಆರಿಕೋಡಿಯಲ್ಲಿ ಲೋಕಾರ್ಪಣೆ

ಗ್ರಾಮ, ತಾಲೂಕು, ಜಿಲ್ಲೆ, ರಾಜ್ಯ, ದೇಶ ಹಾಗೂ ಜಗತ್ತಿನ ಸುದ್ದಿಯನ್ನು ಉಚಿತವಾಗಿ ಪ್ರಕಟಿಸುವ ಹೊಸ ವೆಬ್‌ಸೈಟ್ ದಿನಾಂಕ 3/12/2024 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಪ್ರಸಿದ್ಧ ದೇವಾಲಯ ಶ್ರೀ ಆರಿಕೋಡಿ ಚಾಮುಂಡೇಶ್ವರಿ ದೇವಾಲಯದಲ್ಲಿ ಲೋಕಾರ್ಪಣೆಗೊಂಡಿತು..

Digital Media ದಲ್ಲಿ ಗುರುತಿಸಿಕೊಂಡಿರುವ ವಿ.ಜೆ ವಿಖ್ಯಾತ್ ಹಾಗೂ ಮುರಳಿಕೃಷ್ಣ ಸುಳ್ಯ ಇವರ ಸಹಭಾಗಿತ್ವದಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ಹರೀಶ್ ಆರಿಕೋಡಿ ಯವರು ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.. ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೆಸರರಾದ ಶ್ರೀ ಡೊಂಬಯ್ಯ ಗೌಡ, ಶ್ರೀ ವಸಂತ ಆರಿಕೋಡಿ, ಹಾಗೂ ಕ್ಷೇತ್ರದ ಸೇವಕರು ,ಸಾವಿರಾರು ಭಕ್ತರು ನೆರೆದಿದ್ದರು..!!

ಮಾಧ್ಯಮ ಲೋಕದಲ್ಲಿ ಪ್ರತಿಯೊಂದು ಸುದ್ದಿಯನ್ನು ಸತ್ಯ, ನಿಷ್ಠೆ, ಪ್ರಾಮಾಣಿಕವಾಗಿ,ಜಗತ್ತಿಗೆ ಕನ್ನಡದ ಮೂಲಕ ತಲುಪಿಸುವುದು ಹಾಗೂ ಪ್ರತಿಯೊಬ್ಬ ಬರಹಗಾರರು ತಾವೇ ಪತ್ರಕರ್ತರಾಗಲೂ ಇದೊಂದು ಉಚಿತ ಹಾಗೂ ದೊಡ್ಡ ವೇದಿಕೆ ಎಂಬುದೇ "ನಾನು ಪತ್ರಕರ್ತ. ಕಾಮ್" ನ ಮುಖ್ಯ ಉದ್ದೇಶವಾಗಿದೆ..
Comments