top of page

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ಪುಣೆಯ ಎನ್‌ಐವಿ ಲ್ಯಾಬ್‌ನಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ 14 ವರ್ಷಗಳಿಂದ ದುಬೈನಲ್ಲಿ ವಾಸವಿದ್ದ ಸೋಂಕಿತ, ಇತ್ತೀಚೆಗೆ ಅಂದರೆ ಜನವರಿ 17ರಂದು ಮಂಗಳೂರಿಗೆ ಭೇಟಿ ನೀಡಿದ್ದರು.

40 ವರ್ಷದ ವ್ಯಕ್ತಿಯಲ್ಲಿ ಜ್ವರ, ಗುಳ್ಳೆ ಕಾಣಿಸಿಕೊಂಡಿತ್ತು. ತಕ್ಷಣ ಐಸೋಲೆಟ್ ಮಾಡಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ವ್ಯಕ್ತಿಯ ಸ್ಯಾಂಪಲ್​ನ್ನು ಬೆಂಗಳೂರು ಮೆಡಿಕಲ್ ಕಾಲೇಜು ಹಾಗೂ ಪುಣೆಯ ಎನ್‌ಐವಿ ಲ್ಯಾಬ್‌ಗೆ ರವಾನಿಸಲಾಗಿತ್ತು. ಇದೀಗ ಎನ್‌ಐವಿ ಲ್ಯಾಬ್‌ ರಿಪೋರ್ಟ್‌ನಲ್ಲಿ ಮಂಕಿಪಾಕ್ಸ್‌ ಸೋಂಕು ದೃಢ ಪಟ್ಟಿದೆ.

ಸೋಂಕಿತನ ಆರೋಗ್ಯ ಸ್ಥಿರವಾಗಿದ್ದು, ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ. ಇನ್ನು ಏರ್‌ಪೋರ್ಟ್‌ನಲ್ಲಿ ಸೋಂಕಿತ ಪತಿಯನ್ನು ನೋಡಲು ಬಂದಿದ್ದ ಪತ್ನಿಯನ್ನು ಐಸೋಲೇಷನ್‌ನಲ್ಲಿರಲು ಸೂಚನೆ ನೀಡಲಾಗಿದೆ. ಯಾವುದೇ ಗುಣಲಕ್ಷಣಗಳು ಕಂಡರೆ ತಕ್ಷಣ ತಿಳಿಸಲು ಸೂಚಿಸಿದ್ದು, ಸಾರ್ವಜನಿಕರು ಮಂಕಿಪಾಕ್ಸ್‌ ಬಗ್ಗೆ ಭಯಪಡುವ ಅವಶ್ಯಕತೆಯಿಲ್ಲ. ಮಂಕಿಪಾಕ್ಸ್​ಗೆ ಕೇಂದ್ರ ಸರ್ಕಾರ ಸದ್ಯ ಯಾವುದೇ ಕಾರ್ಯಸೂಚಿಯನ್ನು ಬಿಡುಗಡೆ ಮಾಡಿಲ್ಲ.


ಮಂಕಿಪಾಕ್ಸ್​ನ ಲಕ್ಷಣಗಳು

  • ಊದಿಕೊಂಡ ದುಗ್ಧರಸ ಗ್ರಂಥಿಗಳು

  • ಜ್ವರ

  • ಚಳಿಯ ಅನುಭವ

  • ಸ್ನಾಯು ನೋವು

  • ತಲೆನೋವು

  • ಸುಸ್ತು


ಮಂಕಿಪಾಕ್ಸ್​ಗೆ ಇಲ್ಲಿಯವರೆಗೆ ಯಾವುದೇ ಲಸಿಕೆ ಅಥವಾ ಶಿಫಾರಸು ಮಾಡಿದ ಔಷಧವಿಲ್ಲ. ರೋಗಿಗೆ ಆತನ ರೋಗಲಕ್ಷಣಗಳ ಆಧಾರದ ಮೇಲೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಆಂಟಿವೈರಲ್ ಔಷಧಿಗಳನ್ನು ನೀಡುವ ಮೂಲಕ ವೈದ್ಯರು ರೋಗಿಯ ರೋಗವನ್ನು ನಿಯಂತ್ರಿಸುತ್ತಾರೆ.

Commentaires


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page