ಫೆಬ್ರವರಿ 5ರಂದು ಮಹಾಕುಂಭ ಮೇಳಕ್ಕೆ ಪ್ರಧಾನಿ ಮೋದಿ
- ಸಂಪಾದಕೀಯ
- Feb 4
- 1 min read
ಫೆಬ್ರವರಿ 5ರಂದು ಮಹಾಕುಂಭ ಮೇಳಕ್ಕೆ ಪ್ರಧಾನಿ ಮೋದಿ

ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5ರಂದು ಭೇಟಿ ನೀಡಲಿದ್ದಾರೆ. ಮಾಘ ಮಾಸದ ಅಷ್ಟಮಿಯಂದು ಅವರು ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಸ್ನಾನದ ನಂತರ ಸಂಗಮದಲ್ಲಿ ಗಂಗೆಯನ್ನು ಪೂಜಿಸಲಿದ್ದಾರೆ. ಪ್ರಧಾನಿ ನಾಳೆ ಬೆಳಗ್ಗೆ 10 ಗಂಟೆಗೆ ಮಹಾಕುಂಭವನ್ನು ತಲುಪಲಿದ್ದಾರೆ.
ಇಲ್ಲಿಂದ ಅವರು ಅರೈಲ್ ಘಾಟ್ ನಿಂದ ದೋಣಿ ಮೂಲಕ ಸಂಗಮ್ ಗೆ ಹೋಗಲಿದ್ದಾರೆ. ಒಟ್ಟಾರೆಯಾಗಿ, ಪ್ರಧಾನಿ ಮೋದಿ ಸುಮಾರು ಒಂದು ಗಂಟೆ ಪ್ರಯಾಗ್‌ರಾಜ್‌ನಲ್ಲಿಯೇ ಇರಲಿದ್ದಾರೆ. ಈ ಸಮಯದಲ್ಲಿ ಸ್ನಾನ ಮಾಡಿ ಗಂಗೆಯನ್ನು ಪೂಜಿಸಿ ನಂತರ ಹಿಂತಿರುಗುತ್ತಾರೆ.
ಮಹಾಕುಂಭ ನಗರದಲ್ಲಿ ಪ್ರಧಾನಿ ಮೋದಿ ಸುಮಾರು ಒಂದು ಗಂಟೆಗಳ ಕಾಲ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಬೆಳಗ್ಗೆ 10 ಗಂಟೆ ಸುಮಾರಿಗೆ ವಿಶೇಷ ವಿಮಾನದ ಮೂಲಕ ಬಮ್ರೌಲಿ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ.
ಮೂರು ಸೇನಾ ಹೆಲಿಕಾಪ್ಟರ್‌ಗಳು ಅರೈಲ್‌ನಲ್ಲಿರುವ ಡಿಪಿಎಸ್ ಮೈದಾನದ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದು, ಅಲ್ಲಿಂದ ಕಾರಿನಲ್ಲಿ ತೆರಳಲಿದ್ದಾರೆ. ಇಲ್ಲಿಂದ ಅವರು ಡಿಪಿಎಸ್ ಹೆಲಿಪ್ಯಾಡ್ ಮೂಲಕ ಪ್ರಯಾಗ್‌ರಾಜ್ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ. ಪ್ರಧಾನಿ ಮೋದಿ ಅವರು ಮಧ್ಯಾಹ್ನ 12.30 ಕ್ಕೆ ವಾಯುಪಡೆಯ ವಿಮಾನದ ಮೂಲಕ ಪ್ರಯಾಗ್‌ರಾಜ್‌ನಿಂದ ಹಿಂತಿರುಗಲಿದ್ದಾರೆ.
留言