top of page

100 ವರ್ಷಗಳಿಂದ ಕುಂಭಮೇಳಕ್ಕೆ ಬರ್ತಿದ್ದಾರಂತೆ ಈ ಬಾಬಾ...!

100 ವರ್ಷಗಳಿಂದ ಕುಂಭಮೇಳಕ್ಕೆ ಬರ್ತಿದ್ದಾರಂತೆ ಈ ಬಾಬಾ...!

ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಮಹಾಕುಂಭ ಮೇಳೆ ನಡೆಯುತ್ತಿದ್ದು, ಭಕ್ತಿ, ನಂಬಿಕೆಯ ಮಹಾಪೂರವೇ ಹರಿಯುತ್ತಿದೆ. ಮಹಾಕುಂಭದಲ್ಲಿ ಪಾಲ್ಗೊಳ್ಳಲು ಲಕ್ಷಾಂತರ ಭಕ್ತರು ಮತ್ತು ಸಂತರು ಜಮಾಯಿಸಿದ್ದಾರೆ. ಇವರಲ್ಲಿ ಒಬ್ಬ ಬಾಬಾ ಕಳೆದ 100 ವರ್ಷಗಳಿಂದ ಪ್ರತಿ ಕುಂಭದಲ್ಲಿ ಭಾಗವಹಿಸುತ್ತಿದ್ದಾರೆ. ಅವರ ಹೆಸರು ಸ್ವಾಮಿ ಶಿವಾನಂದ್ ಬಾಬಾ ಮತ್ತು ಅವರು 128 ವರ್ಷಗಳನ್ನು ಪೂರೈಸಿದ್ದಾರೆ.

ಈ ಬಾರಿ ಶಿವಾನಂದ್ ಬಾಬಾ ತಮ್ಮ ಶಿಷ್ಯರೊಂದಿಗೆ ಮಹಾಕುಂಭ ತಲುಪಿದ್ದಾರೆ. ಅವರು 40 ದಿನಗಳ ಕಾಲ ಇಲ್ಲಿ ಧ್ಯಾನ ಮಾಡಲಿದ್ದಾರೆ. ಶಿವಾನಂದ ಬಾಬಾ ಅವರು ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದಾರೆ. ಅವರೂ ಯೋಗ ಪಟು. ಅವರ ಜೀವನವು ಹೋರಾಟದಿಂದ ತುಂಬಿದೆ.

ಮಹಾ ಕುಂಭಮೇಳದ ಸಂದರ್ಭದಲ್ಲಿ ಸೆಕ್ಟರ್ 16 ರಲ್ಲಿ ಸಂಗಮ್ ಕೆಳ ರಸ್ತೆಯಲ್ಲಿ ಬಾಬಾ ಶಿವಾನಂದ್ ಅವರ ಶಿಬಿರವನ್ನು ಸ್ಥಾಪಿಸಲಾಗಿದೆ, ಅವರ ಆಧಾರ್ ಕಾರ್ಡ್ ಅನ್ನು ತೋರಿಸುವ ಬ್ಯಾನರ್ ಇದೆ. ಅವರ ಶಿಷ್ಯನ ಪ್ರಕಾರ, ಬಾಬಾ ಕಳೆದ 100 ವರ್ಷಗಳಿಂದ ಪ್ರಯಾಗ್​ರಾಜ್​, ನಾಸಿಕ್, ಉಜ್ಜಯಿನಿ ಮತ್ತು ಹರಿದ್ವಾರದಲ್ಲಿ ಪ್ರತಿ ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದಾರೆ.

ಬಾಬಾ ಅವರು 8 ಆಗಸ್ಟ್ 1896 ರಂದು ಅವಿಭಜಿತ ಬಂಗಾಳದ (ಇಂದಿನ ಬಾಂಗ್ಲಾದೇಶ) ಶ್ರೀಹಟ್ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ಗೋಸ್ವಾಮಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು, ಅವರದ್ದು ಅತ್ಯಂತ ಬಡ ಕುಟುಂಬವಾಗಿತ್ತು. ಬಾಬಾರವರ ಕುಟುಂಬವು ತುಂಬಾ ಬಡತನದಲ್ಲಿತ್ತು ಎಂದು ಶಿಷ್ಯ ಹೇಳಿದ್ದಾರೆ, ಅವರ ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. ಬಾಲ್ಯದಲ್ಲಿ ಬಾಬಾರ ತಂದೆ-ತಾಯಿಗಳು ಊರಿಗೆ ಬರುವ ಸಂತರಿಗೆ ಕೊಟ್ಟು ಹೊಟ್ಟೆ ತುಂಬಿಸುತ್ತಿದ್ದರು.

ಅವನಿಗೆ ನಾಲ್ಕು ವರ್ಷ ತುಂಬಿದಾಗ, ಅವನ ಕುಟುಂಬವು ಅವನನ್ನು ಸಂತ ಓಂಕಾರಾನಂದ ಗೋಸ್ವಾಮಿಗಳಿಗೆ ಒಪ್ಪಿಸಿತು. ಅವನಿಗೆ 6 ವರ್ಷವಾದಾಗ, ಅವನ ಸಹೋದರಿ ಹಸಿವಿನಿಂದ ಸತ್ತಿದ್ದರಂತೆ.

ಅವನು ಮನೆಗೆ ತಲುಪಿದಾಗ, ಒಂದು ವಾರದ ನಂತರ ಅವನ ಹೆತ್ತವರೂ ಹಸಿವಿನಿಂದ ಸತ್ತರು. ಇಬ್ಬರನ್ನೂ ಒಂದೇ ಚಿತೆಯ ಮೇಲೆ ಸಂಸ್ಕಾರ ಮಾಡಲಾಯಿತು. ಈ ಘಟನೆಯು ಬಾಬಾರ ಮೇಲೆ ಆಳವಾದ ಪ್ರಭಾವ ಬೀರಿತು. ಅಂದಿನಿಂದ ಬಾಬಾ ಪೂರ್ಣ ಪ್ರಮಾಣದ ಊಟವನ್ನೇ ಸೇವಿಸಿಲ್ಲ.

ಬಾಬಾ ಶಿವಾನಂದ್ ಯೋಗ ಮಾಡುತ್ತಾರೆ. ಪ್ರಸ್ತುತ ಅವರು ವಾರಣಾಸಿಯ ದುರ್ಗಕುಂಡ್‌ನ ಕಬೀರ್ ನಗರದಲ್ಲಿ ವಾಸಿಸುತ್ತಿದ್ದಾರೆ. ಮಹಾಕುಂಭದಲ್ಲಿ ಪಾಲ್ಗೊಳ್ಳಲು ಸಂಗಮ ನಗರಕ್ಕೆ ಆಗಮಿಸಿದ್ದಾರೆ. ಅವರ ಶಿಷ್ಯರು ಬಾಬಾರ ದಿನಚರಿಯ ಬಗ್ಗೆ ಹೇಳಿದರು, ಅವರು ಸ್ವಲ್ಪ ಮಾತ್ರ ಆಹಾರ ಸೇವಿಸುತ್ತಾರೆ. ರಾತ್ರಿ 9 ಗಂಟೆಗೆ ಮಲಗುತ್ತಾರೆ.

ಬೆಳಗ್ಗೆ 3 ಗಂಟೆಗೆ ಎದ್ದು ಯೋಗ ಪ್ರಾರಂಭಿಸುತ್ತಾರೆ. ಬಾಬಾ ಶಿವಾನಂದರು ಯಾರಿಂದಲೂ ದೇಣಿಗೆ ಪಡೆದಿಲ್ಲ ಎಂದು ಶಿಷ್ಯ ಹೇಳಿದರು. ಅವರು ಉಪ್ಪು ಮತ್ತು ಎಣ್ಣೆ ಇಲ್ಲದೆ ಬೇಯಿಸಿದ ಆಹಾರವನ್ನು ತಿನ್ನುತ್ತಾರೆ. ಅವರು ಯಾವಾಗಲೂ ರೋಗ ಮುಕ್ತರಾಗಿಯೇ ಇದ್ದಾರೆ.


ಭಕ್ತರೊಬ್ಬರು ಅಚ್ಚರಿ ಪಟ್ಟಿದ್ದರು : ಒಂದು ದಿನ ಬಾಬಾರ ಭಕ್ತರೊಬ್ಬರು ಬಂದಿದ್ದರು, ತುಂಬಾ ಹಸಿವಾಗಿದೆ ಏನಾದರೂ ಕೊಡಿ ಎಂದು ಕೇಳಿಕೊಂಡಿದ್ದರು, ಆಗ ಬಾಬಾ ಮಣ್ಣಿನ ಪಾತ್ರೆಯಲ್ಲಿ ಪಾಯಸ ಕೊಟ್ಟಿದ್ದರು. ಆದರೆ ಆ ಭಕ್ತ ಇಷ್ಟೇನಾ ಇದು ನನಗೆ ಸಾಕಾಗುವುದಿಲ್ಲ ಎಂದು ಹೇಳಿದ್ದರು. ಆದರೆ ನಂತರ ಕುಡಿಯಲು ಆರಂಭಿಸಿದ್ದರು ಆಗ ಭಕ್ತನ ಹೊಟ್ಟೆ ತುಂಬಿತು ಆದರೆ ಪಾಯಸ ಇನ್ನೂ ಸ್ವಲ್ಪ ಹಾಗೆಯೇ ಇತ್ತು. ಅದನ್ನು ನೋಡಿ ತಕ್ಷಣ ಭಕ್ತ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದ.


"2022ರ ಮಾರ್ಚ್ ​31ರಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶಿವಾನಂದ್ ಬಾಬಾ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದ್ದರು."

コメント


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page