ನೆಟ್ಫ್ಲಿಕ್ಸ್ನಲ್ಲಿ ‘ಪುಷ್ಪ 2’ ; ಕನ್ನಡ ಪ್ರೇಕ್ಷಕರಿಗೆ ಇಲ್ಲಿಯೂ ನಿರಾಸೆ
- ಸಂಪಾದಕೀಯ
- Jan 30
- 1 min read
ನೆಟ್ಫ್ಲಿಕ್ಸ್ನಲ್ಲಿ ‘ಪುಷ್ಪ 2’ ; ಕನ್ನಡ ಪ್ರೇಕ್ಷಕರಿಗೆ ಇಲ್ಲಿಯೂ ನಿರಾಸೆ

‘ಪುಷ್ಪ 2’ ಚಿತ್ರವನ್ನು ಒಟಿಟಿಯಲ್ಲಿ ಪ್ರಸಾರ ಆರಂಭಿಸಿದೆ. ‘ನೆಟ್ಫ್ಲಿಕ್ಸ್’ ಮೂಲಕ ಈ ಸಿನಿಮಾ ಇಂದಿನಿಂದ (ಜನವರಿ 30) ಪ್ರಸಾರ ಕಾಣುತ್ತಿದೆ. ಇದು ರೀಲೋಡೆಡ್ ವರ್ಷನ್ ಆಗಿದ್ದು, ಬರೋಬ್ಬರಿ 3 ಗಂಟೆ 44 ನಿಮಿಷ ಸಿನಿಮಾದ ಅವಧಿ ಆಗಿದೆ. ಈ ಚಿತ್ರದ ಕನ್ನಡ ವರ್ಷನ್ ಇನ್ನೂ ಬಿಡುಗಡೆ ಆಗಿಲ್ಲ. ಉಳಿದ ಎಲ್ಲಾ ಭಾಷೆಗಳಲ್ಲಿ ಚಿತ್ರ ವೀಕ್ಷಣೆಗೆ ಲಭ್ಯ ಇದೆ. ಇದು ಕನ್ನಡಿಗರಿಗೆ ಬೇಸರ ಮೂಡಿಸಿದೆ.
ಯಾವುದೇ ಪರಭಾಷೆ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆದರೂ, ಅಲ್ಲಿ ಕನ್ನಡ ವರ್ಷನ್ ಶೋಗಳು ಕಡಿಮೆ ಇರುತ್ತವೆ. ಈ ಸಮಸ್ಯೆ ಮೊದಲಿನಿಂದಲೂ ಇದೆ. ಇದು ಅನೇಕರಿಗೆ ಗೊತ್ತಿರುವ ವಿಚಾರ ಆಗಿದೆ. ಆದರೆ, ಯಾರೊಬ್ಬರೂ ಈ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ. ಈಗ ಒಟಿಟಿಯಲ್ಲೂ ಕನ್ನಡ ವೀಕ್ಷಕರಿಗೆ ಮೋಸ ಆಗುತ್ತಿದೆ. ‘ನೆಟ್ಫ್ಲಿಕ್ಸ್’ ವಿರುದ್ಧ ಅನೇಕರು ಕಿಡಿಕಾರಿದ್ದಾರೆ.
ನೆಟ್ಫ್ಲಿಕ್ಸ್ ಸಂಸ್ಥೆಯು ತನ್ನ ಒಟಿಟಿ ಮೂಲಕ ‘ಪುಷ್ಪ 2’ ಚಿತ್ರವನ್ನು ಬಿಡುಗಡೆ ಮಾಡಿದೆ. ಥಿಯೇಟರ್ನಲ್ಲಿ ಸಿನಿಮಾ ರಿಲೀಸ್ (ಡಿಸೆಂಬರ್ 5) ಆದ ಸುಮಾರು ಎರಡು ತಿಂಗಳ ಬಳಿಕ ಚಿತ್ರವನ್ನು ಒಟಿಟಿಯಲ್ಲಿ ತಂದಿದೆ. ತೆಲುಗು ಜೊತೆ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ವರ್ಷನ್ನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯ ಇದೆ. ಆದರೆ, ಕನ್ನಡ ವರ್ಷನ್ ರಿಲೀಸ್ ಆಗಿಯೇ ಇಲ್ಲ. ಈ ಬಗ್ಗೆ ನೆಟ್ಫ್ಲಿಕ್ಸ್ ಮಾಹಿತಿ ನೀಡಿದ್ದು, ಕನ್ನಡ ವರ್ಷನ್ ಬೇಗ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.
‘ಪುಷ್ಪ 2’ ಚಿತ್ರದಲ್ಲಿ ಅಲ್ಲು ಅರ್ಜುನ್ ನಟಿಸಿದ್ದಾರೆ. ಈ ಮೊದಲು ಬೆಂಗಳೂರಿನಲ್ಲಿ ಯಾವುದೇ ಸುದ್ದಿಗೋಷ್ಠಿ ಮಾಡದೆ ಕನ್ನಡವನ್ನು ನಿರ್ಲಕ್ಷ್ಯ ಮಾಡುವ ಕೆಲಸ ಆಗಿತ್ತು. ಈಗ ಒಟಿಟಿಯಲ್ಲೂ ಅದೇ ಕೆಲಸ ಆಗಿದೆ. ಇದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು, ಕನ್ನಡ ಸಿನಿಮಾಗಳನ್ನು ನೆಟ್ಫ್ಲಿಕ್ಸ್ನಲ್ಲಿ ನೋಡಬೇಕು ಎಂದರೆ ಅಲ್ಲೊಂದು ಇಲ್ಲೊಂದು ಸಿನಿಮಾ ಸಿಗುತ್ತದೆ. ಅನೇಕ ಸಿನಿಮಾಗಳಿಗೆ ಕನ್ನಡದ ಆಡಿಯೋ ನೀಡದೆ ಅವರು ಕನ್ನಡದವರನ್ನು ಕಡೆಗಣಿಸಿದ್ದರು. ಈಗ ‘ಪುಷ್ಪ 2’ ಚಿತ್ರದ ಮೂಲಕವೂ ಅದು ಮುಂದುವರಿದಿದೆ.
Comments