ಮಂಗಳೂರಿನಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್
- ಸಂಪಾದಕೀಯ
- Jan 6
- 1 min read
ಮಂಗಳೂರಿನಲ್ಲಿ ಕಾಣಿಸಿಕೊಂಡ ರಾಕಿಂಗ್ ಸ್ಟಾರ್ ಯಶ್

ಖ್ಯಾತ ಚಲನಚಿತ್ರ ನಟ ರಾಕಿಂಗ್ ಸ್ಟಾರ್ ಯಶ್ ರವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರದಂದು ದಿಢೀರ್ ಕಾಣಿಸಿಕೊಂಡಿದ್ದಾರೆ.
ಅವರು ಮುಖಕ್ಕೆ ಮಾಸ್ಕ್ ಹಾಕಿ ತೆರಳುತ್ತಿರುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದ್ದು, ಅವರ
ಮಂಗಳೂರು ಪ್ರವಾಸ ಗೌಪ್ಯವಾಗಿತ್ತು, ಯಾರಿಗೂ ಮಾಹಿತಿ ತಿಳಿಯಬಾರದು ಎಂಬ ಉದ್ದೇಶದಿಂದ ಚಾರ್ಟರ್ಡ್ ಫ್ಲೈಟ್ ನಲ್ಲಿ ಆಗಮಿಸಿದ್ದರು.
ಮೂಲಗಳ ಪ್ರಕಾರ ಚಲನಚಿತ್ರ ಚಿತ್ರೀಕರಣಕ್ಕೆ ಸಂಬಂಧಪಟ್ಟಂತೆ ಲೊಕೇಶನ್ ಶೋಧಕ್ಕಾಗಿ ಆಗಮಿಸಿದ್ದಾರೆ ಎನ್ನಲಾಗುತ್ತಿದ್ದು, ಅವರ ಬಹುನಿರೀಕ್ಷಿತ “ಟಾಕ್ಸಿಕ್” ಚಲನಚಿತ್ರ ಬಿಡುಗಡೆಗೆ ಬಾಕಿಯಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
Comments