top of page

ಎಲ್ಲರ ಬೆಂಬಲದಿಂದ ಚಿಕಿತ್ಸೆ ಯಶಸ್ವಿಯಾಗಿದೆ, ‘ಕಿಂಗ್ ಈಸ್ ಬ್ಯಾಕ್’ ಎಂದ ಶಿವಣ್ಣ

ಎಲ್ಲರ ಬೆಂಬಲದಿಂದ ಚಿಕಿತ್ಸೆ ಯಶಸ್ವಿಯಾಗಿದೆ, ‘ಕಿಂಗ್ ಈಸ್ ಬ್ಯಾಕ್’ ಎಂದ ಶಿವಣ್ಣ

ಅನಾರೋಗ್ಯದಿಂದ ಬಳಲಿದ್ದ ಶಿವರಾಜ್ ಕುಮಾರ್ ಚಿಕಿತ್ಸೆಗಾಗಿ ಒಂದು ತಿಂಗಳ ಹಿಂದೆ ಅಮೆರಿಕಕ್ಕೆ ತೆರಳಿದ್ದರು. ಅಮೆರಿಕದ ಮಿಯಾಮಿ ಕ್ಯಾನ್ಸರ್ ಇನ್​ಸ್ಟಿಟ್ಯೂಟ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಶಿವರಾಜ್ ಕುಮಾರ್ ಒಂದು ತಿಂಗಳ ಬಳಿಕ ಇಂದು (ಜನವರಿ 26) ತಾಯ್ನಾಡಿಗೆ ಮರಳಿದ್ದಾರೆ. ವಿಮಾನ ನಿಲ್ದಾಣದಲ್ಲಿ ಶಿವರಾಜ್ ಕುಮಾರ್ ಅವರನ್ನು ಬಲು ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಏರ್​ಪೋರ್ಟ್​ ಟೋಲ್ ಬಳಿ ಸೇಬಿನ ಹಾರ ಹಾಕಿ ಸ್ವಾಗತ ಮಾಡಲಾಗಿದೆ. ಶಿವರಾಜ್ ಕುಮಾರ್ ನಿವಾಸದ ಬಳಿಯೂ ಸಹ ಶಿವಣ್ಣನ ಮನೆ ಮೇಲೆ ಹೂಮಳೆಯನ್ನೇ ಅಭಿಮಾನಿಗಳು ಸುರಿಸಿದ್ದಾರೆ.

ನಿವಾಸಕ್ಕೆ ಆಗಮಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದ ಶಿವರಾಜ್ ಕುಮಾರ್, ‘ಅಮೆರಿಕಕ್ಕೆ ಹೋಗಬೇಕಾದರೆ ಎಮೋಷನಲ್ ಆಗಿದ್ದೆ, ಭಯವೂ ಇತ್ತು. ಏನೇ ಆದರೂ ಜೀವನದಲ್ಲಿ ಫೇಸ್ ಮಾಡಬೇಕು, ಮಾಡೋಣ ನೋಡೋಣ ಎಂದರೆ ಆಗಲ್ಲ. ಹೋಗುವಾಗ ಭಯವಿತ್ತು, ವಿಮಾನದಲ್ಲಿ ಟ್ರಾವೆಲ್ ಮಾಡುವಾಗಲೂ ಸಹ ನನಗೆ ತುಸು ಅಳುಕು ಇತ್ತು. ಅಲ್ಲಿಗೆ ಹೋದ ಮೇಲೆ ಕಾನ್ಫಿಡೆನ್ಸ್ ಬಂತು, ಶಸ್ತ್ರಚಿಕಿತ್ಸೆ ಆಗುವ ದಿನವೂ ಭಯ ಇತ್ತು. 6 ಗಂಟೆ ಮನೆಯವರಿಗೂ ಟೆನ್ಶನ್ ಇತ್ತು, ಆದರೆ ಎಲ್ಲವೂ ಯಶಸ್ವಿಯಾಗಿ ಆಯ್ತು’ ಎಂದಿದ್ದಾರೆ ಶಿವರಾಜ್ ಕುಮಾರ್.

ಆಪರೇಷನ್ ಬಳಿಕ ಟೈಮ್ ತೆಗೊಂಡು ವಾಕಿಂಗ್ ಶುರು ಮಾಡಿದೆ, ನಿಧಾನಕ್ಕೆ ಆರೋಗ್ಯ ಸರಿ ಹೋಯ್ತು. ಹೆಣ್ಣುಮಕ್ಕಳಿಗೆ ತುಂಬಾ ಕಷ್ಟ ಈ ಸಮಯದಲ್ಲಿ, ನನಗೆ ಎಲ್ಲರ ಸಪೋರ್ಟ್ ಸಿಕ್ಕಿತು, ಒಂದು ತಿಂಗಳು ಪ್ರತಿಯೊಬ್ಬರೂ ನನ್ ಜೊತೆ ಇದ್ದರು. ಎಲ್ಲರೂ ನನ್ನ ಜೊತೆಗೆ ಇದ್ದರು, ನಾನು ಅದೃಷ್ಟವಂತ ಅನಿಸುತ್ತಿದೆ. ಈಗ ತುಂಬಾ ಸ್ಟ್ರಾಂಗ್ ಆಗಿದೀನಿ. ಎಲ್ಲರ ಆಶೀರ್ವಾದ ನನಗೆ ಸಿಕ್ಕಿದೆ. 38 ವರ್ಷಗಳಿಂದಲೂ ನನ್ನನ್ನು ಬೆಳೆಸಿದ್ದಾರೆ. ‘ಕಿಂಗ್ ಈಸ್ ಬ್ಯಾಕ್’ ಎಂದಿದ್ದಾರೆ ಶಿವರಾಜ್ ಕುಮಾರ್.

ಎರಡು ಮೂರು ದಿನ ಲಿಕ್ವಿಡ್ ಫುಡ್ ನಲ್ಲೇ ಇದ್ದೆ, ಎರಡು ದಿನ, ಮೂರು ದಿನದ ಬಳಿಕ ಲೈಟ್ ವಾಕ್ ಮಾಡೋಕೆ ಶುರು ಮಾಡಿದೆ, ಈ ಥರ ಕಾಯಿಲೆ ಬಂದಾಗ ಹೆಣ್ಣು ಮಕ್ಕಳಿಗೆ ಬಹಳ ಕಷ್ಟವಾಗುತ್ತದೆ. ಜೀವನನೇ ಒಂದು ಪಾಠ, ಜೀವನದಲ್ಲಿ ಇದೆಲ್ಲ ತಾನಾಗಿ ಬರುತ್ತೆ, ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ, ಮುಂದಿನ ಪ್ರಾಜೆಕ್ಟ್ ಬಗ್ಗೆ , ಇವಾಗ 131ನೇ ಸಿನಿಮಾ ಬಗ್ಗೆ ಯೋಜನೆ ನಡೀತಿದೆ. ರಾಮ್ ಚರಣ್ ಅವರ ಸಿನಿಮಾದಲ್ಲಿಯೂ ನಟಿಸುತ್ತೀನಿ ಎಂದಿದ್ದಾರೆ.

Komentáre


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page