ಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಪೋಷಕರ ಒಪ್ಪಿಗೆ ಕಡ್ಡಾಯ...?
- ಸಂಪಾದಕೀಯ

- Jan 4
- 1 min read
ಮಕ್ಕಳ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಪೋಷಕರ ಒಪ್ಪಿಗೆ ಕಡ್ಡಾಯ...?

ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಡಿಜಿಟಲ್ ವೈಯಕ್ತಿಕ ಮಾಹಿತಿ ರಕ್ಷಣಾ ಕರಡು ನಿಯಮಗಳಲ್ಲಿ ಅಂಶ ಒಂದನ್ನು ಉಲ್ಲೇಖಿಸಿದ್ದು, ದೇಶದಲ್ಲಿ ಇನ್ನು ಮುಂದೆ ಮಕ್ಕಳು ತಮ್ಮದೇ ಆದ ಸಾಮಾಜಿಕ ಜಾಲತಾಣ ಖಾತೆ ತೆರೆಯಬೇಕಿದ್ದರೆ ಪೋಷಕರ ಅನುಮತಿ ಕಡ್ಡಾಯವಾಗಿರುತ್ತದೆ. ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಳೆದ ವರ್ಷ ಮಂಡಿಸಿದ್ದ ಮಸೂದೆ ಕರಡನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಆದರೆ ಇದರ ಉಲ್ಲಂಘನೆಗೆ ವಿಧಿಸಬಹುದಾದ ದಂಡದ ಅಂಶಗಳು ಕರಡು ಪ್ರತಿಯಲ್ಲಿ ಲಭ್ಯವಾಗಿಲ್ಲ. ಪೋಷಕರು ಒಪ್ಪಿಗೆ ನೀಡದ ಹೊರತು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯಲು ಸಾಮಾಜಿಕ ಜಾಲತಾಣಗಳು ಅವಕಾಶ ನೀಡಬಾರದೆಂಬ ನಿಯಮ ಈ ಕಾಯ್ದೆ ಮಾಡಿದ್ದು, ಇದನ್ನು ಸರ್ಕಾರ ಪರಿಶೀಲನೆ ನಡೆಸಲು ಸಹ ಅವಕಾಶ ಇರಬೇಕು ಎಂದು ಸೂಚಿಸಿದೆ.
18 ವರ್ಷದೊಳಗಿನ ಎಲ್ಲರೂ ಮಕ್ಕಳು : ಕರಡು ನಿಯಮಗಳಲ್ಲಿ ಉಲ್ಲೇಖ ಮಾಡಿರುವಂತೆ 18 ವರ್ಷ ತುಂಬದ ಎಲ್ಲರನ್ನೂ ಮಕ್ಕಳು ಎಂದು ಗುರುತಿಸಲಾಗುತ್ತದೆ. ಅವರಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಬಳಕೆ ಮಾಡಿಕೊಳ್ಳಲು ಪೋಷಕರ ಅನುಮತಿ ಕಡ್ಡಾಯವಾಗುತ್ತದೆ. ಒಂದು ವೇಳೆ ಇದರ ಉಲ್ಲಂಘನೆಯಾದರೆ ಗರಿಷ್ಠ 250 ಕೋಟಿ ರೂ.ವರೆಗೂ ದಂಡ ವಿಧಿಸಲು ಅವಕಾಶವನ್ನು ಒದಗಿಸಲಾಗಿದೆ ಎಂದು ತಿಳಿದುಬಂದಿದೆ.














Comments