8 ತಿಂಗಳ ಬಳಿಕ ಮಾರ್ಚ್ 19ರಂದು ಭೂಮಿಗೆ ಮರಳಲಿರುವ ಸುನಿತಾ ವಿಲಿಯಮ್ಸ್
- ಸಂಪಾದಕೀಯ
- Mar 17
- 1 min read
8 ತಿಂಗಳ ಬಳಿಕ ಮಾರ್ಚ್ 19ರಂದು ಭೂಮಿಗೆ ಮರಳಲಿರುವ ಸುನಿತಾ ವಿಲಿಯಮ್ಸ್

ಬಾಹ್ಯಾಕಾಶದಲ್ಲಿ ಸಿಲುಕಿರುವ ಭಾರತೀಯ ಮೂಲದ ಅಮೆರಿಕ ಗಗನಯಾನಿ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್‌ಮೋರ್ ಅವರನ್ನು ಭೂಮಿಗೆ ಕರೆ ತರಲು ನಾಸಾ ವಿಜ್ಞಾನಿಗಳ ತಂಡ ಉಡಾವಣೆ ಮಾಡಿದ "ಸ್ಪೇಸ್‌ಎಕ್ಸ್ ಡ್ರ್ಯಾಗನ್ ಸ್ಪೇಸ್‌ಕ್ರಾಫ್ಟ್ ದಿ ಕ್ರ್ಯೂ-10" ಭಾನುವಾರ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿದೆ.
ಕಳೆದ ವರ್ಷದ ಜೂನ್ 5 ರಂದು ಬೋಯಿಂಗ್‌ನ ಸ್ಟಾರ್‌ಲೈನ್ ಗಗನನೌಕೆ ಮೂಲಕ ಸುನಿತಾ, ಬುಚ್ ಮತ್ತಿತರ ಗಗನಯಾತ್ರಿಗಳು ಗಗನಯಾನ ಕೈಗೊಂಡಿದ್ದರು. ಎಂಟು ದಿನಗಳ ಬಳಿಕ ಭೂಮಿಗೆ ಮರಳ ಬೇಕಿದ್ದ ಗಗನಯಾನಿಗಳು ನೌಕೆಯಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿದ್ದರು. ಇದೀಗ ಬರೋಬ್ಬರಿ 8 ತಿಂಗಳ ಬಳಿಕ ಭೂಮಿಗೆ ವಾಪಸಾಗುತ್ತಿದ್ದಾರೆ.
ಬಾಹ್ಯಾಕಾಶ ನಿಲ್ದಾಣ ತಲುಪಿರುವ ಸ್ಪೇಸ್‌ಎಕ್ಸ್ ಗಗನನೌಕೆ ಸುನಿತಾ ವಿಲಿಯನ್ಸ್ ಹಾಗೂ ಬುಚ್ ವಿಲ್‌ಮೋರ್ ಜತೆ ಗಗನಯಾನಿಗಳಾದ ನಿಕ್ ಹೇಗ್, ಅಲೆಕ್ಸಾಂಡರ್ ಗೊರ್ಬನೊವ್ ಅವರನ್ನು ಮರಳಿ ಭೂಮಿಗೆ ಕರೆ ತರಲಿದೆ. ನಿಗದಿತ ಯೋಜನೆಯಂತೆ ಸಾಗಿದರೆ ನಾಲ್ವರು ಗಗನಯಾನಿಗಳು ಬುಧವಾರ ಭೂಮಿಗೆ ತಲುಪಲಿದ್ದಾರೆ. ರಕ್ಷಣಾ ನೌಕೆಯಲ್ಲಿ ತೆರಳಿರುವ ನಾಲ್ವರು ಸೇರಿದಂತೆ ಒಟ್ಟು 11 ಗಗನಯಾನಿಗಳ ತಂಡ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿಯಲಿದೆ.

Comments