ಹನುಮಂತನ ಬಗ್ಗೆ ಮಾತನಾಡಿ ಟ್ರೋಲ್ ಆದ ತ್ರಿವಿಕ್ರಂ ತಾಯಿ..!
- ಸಂಪಾದಕೀಯ
- Jan 28
- 1 min read
ಹನುಮಂತನ ಬಗ್ಗೆ ಮಾತನಾಡಿ ಟ್ರೋಲ್ ಆದ ತ್ರಿವಿಕ್ರಂ ತಾಯಿ..!

‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಂಡಿದೆ. ಹನುಮಂತ ಅವರು ಬಿಗ್ ಬಾಸ್ ಕಪ್ ಎತ್ತಿ ಭೇಷ್ ಎನಿಸಿಕೊಂಡಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಹೋಗುವ ಮೊದಲು ಯಾವ ರೀತಿಯಲ್ಲಿ ಇದ್ದರೋ ಈಗಲೂ ಹಾಗೆಯೇ ಇದ್ದಾರೆ. ಅವರ ಸರಳತೆ ಅಭಿಮಾನಿಗಳಿಗೆ ಇಷ್ಟ ಆಗುತ್ತಿದೆ. ಈ ಮಧ್ಯೆ ರನ್ನರ್ ಅಪ್ ತ್ರಿವಿಕ್ರಂ ತಾಯಿಗೆ ಟ್ರೋಲ್ ಬಿಸಿ ತಟ್ಟಿದೆ. ಅಷ್ಟಕ್ಕೂ ಅವರು ನೀಡಿದ ಹೇಳಿಕೆ ಏನು ಎಂಬ ಬಗ್ಗೆ ಇಲ್ಲಿದೆ ವಿವರ.
‘ಬಿಗ್ ಬಾಸ್’ ಫಿನಾಲೆಯಲ್ಲಿ ಸುದೀಪ್ ಅಕ್ಕ-ಪಕ್ಕ ಹನುಮಂತ ಹಾಗೂ ತ್ರಿವಿಕ್ರಂ ನಿಂತಿದ್ದರು. ಹನುಮಂತ ಅವರು 5.20 ಕೋಟಿ ವೋಟ್ ಪಡೆದರೆ ತ್ರಿವಿಕ್ರಂ ಅವರು ಎರಡೂವರೆ ಕೋಟಿ ಮತಗಳನ್ನು ಪಡೆದರು. ಈ ಮೂಲಕ ಹನುಮಂತ ವಿನ್ನರ್ ಎಂದು ಸುದೀಪ್ ಅವರು ಘೋಷಣೆ ಮಾಡಿದರು. ಇದು ತ್ರಿವಿಕ್ರಂ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ. ತ್ರಿವಿಕ್ರಂ ತಾಯಿಗೂ ಈ ಬಗ್ಗೆ ಅಸಮಧಾನ ಇದೆಯೇ ಎನ್ನುವ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ ಅವರ ಹೇಳಿಕೆ.
"ಹನುಮಂತನಲ್ಲಿ ನನಗೇನು ಕಾಣಿಸಿಲ್ಲ. ಅವನಿಗೆ ಸಿಗುವ ಬದಲು ಬೇರೆ ಯಾರಿಗಾದರು ಸಿಕ್ಕಿದ್ದರೆ ಖುಷಿ ಇರುತ್ತಿತ್ತು. ನನ್ನ ಮಗನಿಗೆ ಬೇಕು ಎಂದಿಲ್ಲ" ಎಂದು ತ್ರಿವಿಕ್ರಂ ಅವರ ತಾಯಿ ಹೇಳಿಕೆ ನೀಡಿದ್ದರು. ಇದಕ್ಕೆ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಅವರು ಈ ರೀತಿಯ ಹೇಳಿಕೆ ನೀಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಈ ವಿಡಿಯೋ ಹರಿದಾಡುತ್ತಿದೆ. ತ್ರಿವಿಕ್ರಂ ತಾಯಿ ಈ ರೀತಿಯ ಹೇಳಿಕೆ ನೀಡಬಾರದಿತ್ತು ಎಂದು ಕೆಲವರು ಹೇಳಿದರೆ, ಇನ್ನೂ ಕಲವರು ‘ತ್ರಿವಿಕ್ರಂಗಿಂತ ಹನುಮಂತ ಉತ್ತಮವಾಗಿ ಆಡಿದ್ದಾರೆ’ ಎನ್ನುವ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
Comments