ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅವಮಾನ ಮಾಡಿದ ಮಲಯಾಳಂ ಸಿನಿಮಾ
- ಸಂಪಾದಕೀಯ
- Feb 20
- 1 min read
ರಾಕಿಂಗ್ ಸ್ಟಾರ್ ಯಶ್ ಅವರಿಗೆ ಅವಮಾನ ಮಾಡಿದ ಮಲಯಾಳಂ ಸಿನಿಮಾ

ಇತ್ತೀಚೆಗೆ ಮಲಯಾಳಂನಲ್ಲಿ ‘ಮಾರ್ಕೊ’ ಹೆಸರಿನ ಸಿನಿಮಾ ಬಂತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಯಶಸ್ಸು ಕಂಡಿತು. ಆದರೆ ಸಿನಿಮಾದಲ್ಲಿ ಘನಘೋರವಾದ ಹಿಂಸೆಯಿತ್ತು.
ಇದೇ ಸಿನಿಮಾದಲ್ಲಿ ನಾಯಕನ ಪಾತ್ರ ಮಾಡಿದ ಉನ್ನಿ ಮುಕುಂದನ್, ‘ಮಾರ್ಕೊ’ ಸಿನಿಮಾದಲ್ಲಿ ‘ಕೆಜಿಎಫ್’ ಸಿನಿಮಾವನ್ನು ಯಶ್ ಬಗ್ಗೆ ಕೆಟ್ಟದಾಗಿ ಹೀಗಳೆದಿದ್ದಾರೆ. ದೃಶ್ಯದ ತುಣುಕು ವೈರಲ್ ಆಗುತ್ತಿದ್ದು ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಿನಿಮಾದ ಫೈಟ್ ದೃಶ್ಯವೊಂದರಲ್ಲಿ ನಾಯಕ(ಉನ್ನಿ ಮುಕುಂದನ್) ಸಂಭಾಷಣೆಯೊಂದನ್ನು ಹೇಳುತ್ತಾನೆ, "ನಾನು ನಾಯಿ ಪ್ರೇಮಿ, ನನ್ನ ಬಳಿ ಒಂದು ಹಸ್ಕಿ ನಾಯಿ ಇದೆ, ಆ ನಾಯಿಯ ಹೆಸರು ರಾಕಿ" ಎನ್ನುತ್ತಾನೆ. ಅಷ್ಟಕ್ಕೆ ಸುಮ್ಮನಾಗದೆ, ರಾಕಿ ಹೆಸರು ಹೇಳಿದ ಬಳಿಕ ಕೆಟ್ಟದಾಗಿ ಕ್ಯಾಕರಿಸಿ ಉಗಿಯುತ್ತಾನೆ ಈ ಸನ್ನಿವೇಶದಲ್ಲಿ ನಾಯಕನ ಮುಖಭಾವ, ಸಂಭಾಷಣೆಯಲ್ಲಿ ನೀಡುವ ಮಾಹಿತಿ ಆ ಸಂಭಾಷಣೆ ‘ಕೆಜಿಎಫ್’ ಸಿನಿಮಾದ ರಾಕಿಭಾಯ್ ಕುರಿತಾಗಿಯೇ ಆಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ.

Comments