ವಂದೇ ಭಾರತ್ ಸ್ಲೀಪರ್ ರೈಲು ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
- ಸಂಪಾದಕೀಯ
- Jan 3
- 1 min read
ವಂದೇ ಭಾರತ್ ಸ್ಲೀಪರ್ ರೈಲು ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

ರಾಜಸ್ಥಾನದ ಕೋಟದಲ್ಲಿ ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲುಗಳ 2ನೇ ಹಂತದ ಪರೀಕ್ಷಾರ್ಥ ಓಡಾಟ ನಡೆಸಲಾಗುತ್ತಿದ್ದು, ಇದರ ಭಾಗವಾಗಿ ಜ.2 ರಂದು ರೈಲಿನ ವೇಗದ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ರೈಲು ಗಂಟೆಗೆ 180 ಕಿ.ಮೀ. ಗರಿಷ್ಠ ವೇಗವನ್ನು ದಾಖಲಿಸಿದೆ.
ಪ್ರಾಯೋಗಿಕ ಪರೀಕ್ಷೆ ವೇಳೆ ರೈಲಿನೊಳಗಿದ್ದ ನೀರು ತುಂಬಿದ ಲೋಟದಿಂದ ಒಂದೂ ಹನಿಯೂ ನೀರು ಹೊರಚೆಲ್ಲದ ವೀಡಿಯೋವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರೈಲ್ವೆ ಸುರಕ್ಷಾ ಮಾನದಂಡಗಳ ಅನ್ವಯ ಪ್ರಯಾಣಿಕರನ್ನು ಹೊತ್ತ ಈ ರೈಲುಗಳು ಗಂಟೆಗೆ 160 ಕಿ.ಮೀ ಚಲಿಸಬಹುದಾಗಿದೆ. ಈ ರೈಲುಗಳ ಓಡಾಟಕ್ಕೆ ವಿಭಿನ್ನ ಹಳಿಗಳ ನಿರ್ಮಾಣದ ಅಗತ್ಯವಿರುವುದರಿಂದ ದೆಹಲಿ-ಆಗ್ರಾ ಮಾರ್ಗ ಹೊರತು ಪಡಿಸಿ ದೇಶದ ಬಹುತೇಕ ಕಡೆ ಈ ರೈಲುಗಳು ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸುತ್ತವೆ.
Comments