ಮಹಾಕುಂಭ ಮೇಳ 2025 : ಪ್ರಧಾನಿ ಮೋದಿಯಿಂದ ಪ್ರಶಸ್ತಿ ಪಡೆದ ಕರುನಾಡ ಕುವರನಿಗೆ ಮಹಾಕುಂಭ ಮೇಳದ ಉಸ್ತುವಾರಿ...! ಯಾರವರು ಗೊತ್ತಾ...?
- ಸಂಪಾದಕೀಯ
- Jan 15
- 2 min read
ಮಹಾಕುಂಭ ಮೇಳ 2025 : ಪ್ರಧಾನಿ ಮೋದಿಯಿಂದ ಪ್ರಶಸ್ತಿ ಪಡೆದ ಕರುನಾಡ ಕುವರನಿಗೆ ಮಹಾಕುಂಭ ಮೇಳದ ಉಸ್ತುವಾರಿ...!
ಯಾರವರು ಗೊತ್ತಾ...?

ಪ್ರಯಾಗ್ರಾಜ್: ಹಿಂದೆ ನಡೆದಿದ್ದ ಮಹಾಕುಂಭ ಮೇಳದಲ್ಲಿ ಈಗಿರುವ ಯಾರೂ ಬದುಕಿರಲಿಲ್ಲ. ಮುಂದೆ ನಡೆಯುವ ಮಹಾ ಕುಂಭಮೇಳದ ಸಮಯದಲ್ಲಿಯೂ ಸಹ ನಾವ್ಯಾರೂ ಬದುಕಿರುವುದಿಲ್ಲ! ಇಂತಹ ಸಂದರ್ಭದಲ್ಲಿ 144 ವರ್ಷಗಳ ನಂತರ ನಡೆಯುತ್ತಿರುವ ಈ ಐತಿಹಾಸಿಕವಾದ ಮಹಾಕುಂಭ ಮೇಳದಲ್ಲಿ ಪ್ರತಿದಿನ ಕೊಟ್ಯಾಂತರ ಜನರು ಪುಣ್ಯ ಸ್ನಾನ ಮಾಡಿ ಧನ್ಯರಾಗುತ್ತಿದ್ದಾರೆ. ಆದರೆ ನಿಮಗೆ ಗೊತ್ತಾ ಈ ಬಾರಿಯ ಮಹಾಕುಂಭ ಮೇಳದ ನೇತೃತ್ವ ವಹಿಸಿರುವುದು ಕರುನಾಡಿನ ಕುವರ ಎನ್ನುವುದು. ಹೌದು 45 ಕೋಟಿಗೂ ಅಧಿಕ ಜನರು ಆಗಮಿಸುವ ನಿರೀಕ್ಷೆಯಿರುವ ಮಹಾಕುಂಭಮೇಳವನ್ನು ನಿಭಾಯಿಸುತ್ತಿರುವುದು ಹೆಮ್ಮೆಯ ಕನ್ನಡಿಗ.
ಜನವರಿ 13 ರಂದು ಪ್ರಾರಂಭವಾದ ಮಹಾಕುಂಭ ಮೇಳದಲ್ಲಿ ಮೊದಲ ದಿನ 1 ಕೋಟಿ ಜನರು ಭಾಗವಹಿಸಿದ್ದರೆ, ಎರಡನೇಯ ದಿನ ಅಂದರೆ ಜನವರೆ 14 ರ ಮಕರ ಸಂಕ್ರಾಂತಿಯಂದು ಬರೊಬ್ಬರಿ 3.5 ಕೋಟಿ ಜನರು ಭಾಗವಹಿಸಿದ್ದರು. ಇಂತಹ ಅದ್ದೂರಿ ಮೇಳವದ ನೃತೃತ್ವ ವಹಿಸಿರುವುದು ಕರ್ನಾಟಕ ಮೂಲದ ದಕ್ಷ ಐಎಎಸ್ ಅಧಿಕಾರಿ; ಹೌದು, ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಜನಿಸಿದ ವಿಜಯ ಕಿರಣ್ ಆನಂದ್ ಅವರೇ ಮಹಾಕುಂಭ ಮೇಳದ ನೇತೃತ್ವ ವಹಿಸಿರುವುದು.
ಬೆಂಗಳೂರಿನ ಇಂದಿರಾನಗರದ ನಿವಾಸಿಯಾದ ವಿಜಯ ಕಿರಣ್ ಆನಂದ್ ಅವರು ಈಗ ಪ್ರಯಾಗರಾಜ್ ಜಿಲ್ಲಾಧಿಕಾರಿ ಆಗಿದ್ದಾರೆ. 2009ರ ಉತ್ತರ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಆನಂದ್ ಅವರು, ಈ ಹಿಂದೆ ಗೋರಖ್‌ಪುರ ಜಿಲ್ಲಾಧಿಕಾರಿಯಾಗಿದ್ದ ವೇಳೆಯಲ್ಲಿ ಇವರ ಕಾರ್ಯಕ್ಷಮತೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಹತ್ತಿರದಿಂದ ಬಲ್ಲವರಾಗಿದ್ದರು. ಹೀಗಾಗಿಯೇ, ಸಿಎಂ ಯೋಗಿ ಅವರು ಪ್ರಯಾಗ್ರಾಜ್ ಜಿಲ್ಲಾಧಿಕಾರಿಯಾಗಿ ನೇಮಿಸಿ ಮಹಾಕುಂಭ ಮೇಳದ ಮಹತ್ವದ ಜವಾಬ್ದಾರಿಯನ್ನು ವಹಿಸಿದ್ದಾರೆ. ಇದರೊಂದಿಗೆ ಅವರು ಮಹಾಕುಂಭಮೇಳದ ಮೇಳಾಧಿಕಾರಿಯಾಗಿಯು ಕೆಲಸ ನಿರ್ವಹಿಸುತ್ತಿದ್ದಾರೆ.
ವಿಜಯ ಕಿರಣ್ ಆನಂದ್ ವೃತ್ತಿಯ ಹಿನ್ನಲೆ : 2009ರ ಉತ್ತರ ಪ್ರದೇಶ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ವಿಜಯ ಕಿರಣ್ ಆನಂದ್ ಅವರು, ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿಯೂ ಉತ್ತೀರ್ಣರಾಗಿದ್ದಾರೆ. ಇನ್ನು ಉಪ ವಿಭಾಗಾಧಿಕಾರಿಯಾಗಿ ಮೊದಲ ಬಾರಿಗೆ ಬಾಗ್ಪತ್ ಜಿಲ್ಲೆಯಲ್ಲಿ ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದ ಅವರು ನಂತರ ಬಾರಾಬಂಕಿ ಜಿಲ್ಲೆಯ ಮುಖ್ಯ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸೇವೆ ಸಲ್ಲಿಸಿದ್ದರು. ಮುಂದೆ ಮೈನ್‌ಪುರಿ, ಉನ್ನಾವೋ, ಫಿರೋಜಾಬಾದ್, ವಾರಣಾಸಿ, ಗೋರಖ್‌ಪುರ ಮತ್ತು ಶಹಜಹಾನ್‌ಪುರದಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಧಾನಿಯಿಂದ ಗೌರವ : ಗೋರಖ್‌ಪುರದ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಾಗರಿಕ ಸೇವೆಗಳ ದಿನದಂದು, ಅವರ ದಕ್ಷತೆ ಮಚ್ಚಿ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ್ ಆನಂದ್ ಅವರಿಗೆ ಪ್ರಧಾನ ಮಂತ್ರಿ ಪ್ರಶಸ್ತಿ 2020 ನೀಡಿ ಗೌರವಿಸಿದರು.
ಇನ್ನು 2017 ಮತ್ತು 2019 ರಲ್ಲಿ ಅವರು ಕ್ರಮವಾಗಿ ಮಾಘ ಮೇಳ ಮತ್ತು ಅರ್ಧ ಕುಂಭಮೇಳದ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಈ ಎಲ್ಲ ಕಾರಣಗಳಿಂದ ವಿಜಯ್ ಆನಂದ್ ಅವರು ಮಹಾಕುಂಭ ಮೇಳದ 2025 ರ ಮುಖ್ಯ ಅಧಿಕಾರಿಯಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ.
ಇನ್ನು ಇದಕ್ಕೂ ಮುನ್ನ 2021ರಂದು ಪ್ರಯಾಗ್ರಾಜ್ನಲ್ಲಿಯೇ ನಡೆದ ಕುಂಭದ ಮೇಳಾಧಿಕಾರಿಯಾಗಿಯೂ ಕನ್ನಡಿಗ ಐಎಎಸ್ ಅಧಿಕಾರಿಯಾಗಿರುವ ಪ್ಯಾರಾಲಿಂಪಿಕ್ಸ್ ಮೆಡಲಿಸ್ಟ್ ಸುಹಾಸ್ ಯತಿರಾಜ್ ಅವರು ನಿಭಾಯಿಸಿದ್ದರು ಎನ್ನುವುದು ಹೆಮ್ಮೆಯ ವಿಷಯವಾಗಿದೆ.
Comments