ಪ್ರಮೋದಾದೇವಿ ಸಮ್ಮುಖದಲ್ಲಿ ಯದುವೀರ್ ಎರಡನೇ ಮಗುವಿಗೆ ನಾಮಕರಣ ; ಹೆಸರೇನು ಗೊತ್ತಾ...?
- ಸಂಪಾದಕೀಯ
- Feb 24
- 1 min read
ಪ್ರಮೋದಾದೇವಿ ಸಮ್ಮುಖದಲ್ಲಿ ಯದುವೀರ್ ಎರಡನೇ ಮಗುವಿಗೆ ನಾಮಕರಣ ; ಹೆಸರೇನು ಗೊತ್ತಾ...?

ಸಂಸದ ಯದುವೀರ್ ಎರಡನೇ ಮಗುವಿಗೆ "ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್" ಎಂದು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗಿದೆ. ಮೊದಲ ಮಗುವಿಗೆ "ಆಧ್ಯವೀರ ಕೃಷ್ಣದತ್ತ ಚಾಮರಾಜ ಒಡೆಯರ್" ಎಂದು ನಾಮಕರಣ ಮಾಡಿದ್ದಾರೆ.
ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ಸಮ್ಮುಖದಲ್ಲಿ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನಾಮಕರಣ ಶಾಸ್ತ್ರ ಕಾರ್ಯಕ್ರಮ ನೆರವೇರಿಸಲಾಗಿದೆ. ಅರಮನೆಯ ಪುರೋಹಿತರು ವಿವಿಧ ಶಾಸ್ತ್ರ ಹಾಗೂ ಧಾರ್ಮಿಕ ಕಾರ್ಯಗಳ ಬಳಿಕ, ಗುರು ಹಿರಿಯರು ಸೂಚಿಸಿದಂತೆ ಯದುವೀರ್ ಹಾಗೂ ತ್ರಿಷಿಕಾ ಕುಮಾರಿ ಅವರು ತಮ್ಮ ಎರಡನೇ ಪುತ್ರನಿಗೆ ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಎಂದು ನಾಮಕರಣ ಮಾಡಿದ್ದಾರೆ.

Comments