ಅಡಿಕೆ ಕೃಷಿಯ ಕಷ್ಟಕರ ಸ್ಥಿತಿ: ಪೆಂಗಲ್ ಚಂಡಮಾರುತದ ಪ್ರಭಾವ
- PEOPLE
- Dec 4, 2024
- 1 min read
ಅಡಿಕೆ ಕೃಷಿಯ ಕಷ್ಟಕರ ಸ್ಥಿತಿ: ಪೆಂಗಲ್ ಚಂಡಮಾರುತದ ಪ್ರಭಾವ

ಆತ್ಮೀಯ ಅಡಿಕೆ ಕೃಷಿಕ ಬಂಧುಗಳೇ,ಪೆಂಗಲ್ ಚಂಡಮಾರುತ ದಿಂದ ನಿನ್ನೆಯಿಂದ ಜೂನ್ ಜುಲೈ ತರ ಮಳೆ ಬರಲು ಶುರು ಆಗಿದೆ..ಅಡಿಕೆ ತೋಟ ಇದ್ದವರ ಪರಿಸ್ಥಿತಿ ಏನಾಗಿರಬೌದು.. ಅಡಿಕೆ ಕಥೆ ಹೇಳಿ ಸುಖ ಇಲ್ಲ.. ಎಲ್ಲಾ ಕಡೆ ಅಡಿಕೆ ಕೊಯಿಲು ಪ್ರಾರಂಭ ಆಗಿದೆ.. ಒಂದು ಕಡೆ ಈ ಸಲ ಜೂನ್ ಜುಲೈ ಲಿ ವಿಪರೀತ ಮಳೆ ಕಾರಣ ಅರ್ಧಕಷ್ಟು ಅಡಿಕೆ ಕೊಳೆ ರೋಗದಿಂದ ಬಿದ್ದು ತೋಟ ಖಾಲಿಯಾಗಿದೆ.. ಇನ್ನೊಂದು ಕಡೆ ಎಲೆ ಚುಕ್ಕಿ ರೋಗ... ಈ ಇದ್ದ ಅಡಿಕೆಯನ್ನಾದ್ರೂ ಕೊಯಿಲು ಮಾಡಿ ಚಂದ ಒಣಗಿಸಿ ಇಡುವ ಅಂದ್ರೆ ನಿನ್ನೆಯಿಂದ ಮಳೆ ಗೆ ಅದು ಕಷ್ಟ... ಕಳೆದ ವರುಷ ಬೆಳೆ ವಿಮೆ ಯಾದ್ರು ಸ್ವಲ್ಪ ಜಾಸ್ತಿ ಬಂದ ಕಾರಣ ಏನು ಅಷ್ಟಾಗಿ ನಷ್ಟ ಆಗಿರ್ಲಿಲ್ಲ.. ಈ ಸಲ ಅರ್ಧದಷ್ಟು ಬೆಳೆ ವಿಮೆ ಬಂದದ್ದು... ಈ ಸಲ ಅಡಿಕೆಯ ಇಳುವರಿ ಕಡಿಮೆ ಇದ್ದ ಕಾರಣ ಅಡಿಕೆ ಒಂದು ಕನಿಷ್ಠ 500ಆದ್ರೂ ಬೆಲೆ ಇದ್ರೆ ಸ್ವಲ್ಪ ಒಳ್ಳೆಯದು ಅಂತ ನನ್ನ ಅಭಿಪ್ರಾಯ ಇಲ್ಲದೇ ಹೋದರೆ ಅಡಿಕೆ ಕೃಷಿಕರಿಗೆ ತುಂಬಾ ಕಷ್ಟ ಇದೆ.. ಏನು ಹೇಳ್ತಿರಿ?
ಬರಹ :
ಆಶಾ ನಾಯಕ್
ಕೃಷಿಕೆ
Comentários