top of page

ಬಸಳೆ ಸೊಪ್ಪು: ಬಾಯಿಗೆ ರುಚಿ, ದೇಹಕ್ಕೆ ಹಿತ

ಕೃಷಿ ಖುಷಿ:



ಬಸಳೆ ಸೊಪ್ಪು:

ಬಾಯಿಗೆ ರುಚಿ,ದೇಹಕ್ಕೆ ಹಿತ ನೀಡುವ ಬಸಳೆಯ ಬಗ್ಗೆ ಒಂದಿಷ್ಟು ಮಾಹಿತಿ:ಸಾಮಾನ್ಯ ವಾಗಿ "ಬಸಳೆ " ಹಳ್ಳಿ ಕಡೆ ಎಲ್ಲಾರ ಮನೆಯಲ್ಲಿ ಬೆಳೆಸುವಂತ ತರಕಾರಿ..ಈ ವರ್ಷ ಅಂತೂ ಅದರ ಒಂದು ಕಟ್ಟಿನ ರೇಟ್ ಕೂಡ 60ರೂಪಾಯಿ ದಾಟಿದೆ ಕೃಷಿಕರಿಗೆ ಖುಷಿ ವಿಚಾರ...ನನ್ನ ಅನುಭವದ ಪ್ರಕಾರ ಇದನ್ನು ಯಾವ ಟೈಮ್ ಲ್ಲೂ ನೆಟ್ಟರು ಕೂಡ ಚೆನ್ನಾಗಿ ಬೆಳೆಯುತ್ತದೆ.. ಬಸಳೆಯನ್ನು ಮುಂಚಿನವರು ನೆಡುತಿದ್ದ ಕ್ರಮ ಹೇಗೆಯಂದರೆ ಅದನ್ನು ಆಟಿ ಸಮಯದಲ್ಲಿ ನೆಡುತ್ತಿದ್ದರು..ಮಳೆ ಸ್ವಲ್ಪ ಕಡಿಮೆ ಆದ ನಂತರ ನೆಟ್ಟರೆ ಒಳ್ಳೆಯದು..




ನೆಡುವ ವಿಧಾನ:

ಇತ್ತೀಚೆಗೆ ಬಸಳೆ ಗೆ ಕೆಂಪು ಹುಳ ಗಂಟು ರೋಗ ಇರುದರಿಂದ ಅದಕ್ಕೆ ನೆಡುವಾಗ ಮಣ್ಣಿಗೆ ಉಪ್ಪು ಮತ್ತೆ ಬೂದಿ ಯನ್ನು ಹಾಕಿ ನೆಟ್ಟರೆ ಗಂಟು ಹುಳ ಬರಲ್ಲ..ಬಸಳೆ ನೆಟ್ಟು ಒಂದು ವಾರದಲ್ಲಿ ಚಿಗುರಲು ಶುರು ಆದಮೇಲೆ ಅದಕ್ಕೆ ಸೆಗಣಿ ಮತ್ತೆ ನೆಲಕಡ್ಲೆ ಹಿಂಡಿ ಒಂದು ಬಕೆಟ್ ಗೆ ನೀರು ಹಾಕಿ ಒಂದು ವಾರದ ನಂತರ ಬುಡಕ್ಕೆ ಹಾಕಿದ್ರೆ ಸೊಂಪಾಗಿ ಬೆಳೆಯುತ್ತದೆ...ಆದನಂತರ ಒಂದು ಕಡಿಮೆ ಎತ್ತರ ದಲ್ಲಿ ಒಂದು ಚಪ್ಪರ ಹಾಕಿದ್ರೆ ಬಸಳೆ ಕೊಯ್ಯಲು ಕೂಡ ಸುಲಭ.ಇನ್ನೊಂದು ಮುಖ್ಯ ವಿಷಯ ನಾವು ಬಸಳೆ ಅಥವಾ ಬೇರೆ ತರಕಾರಿಗಳಿಗೆ

ರಾಸಾಯನಿಕ ಗೊಬ್ಬರ ಹಾಕಲೇ ಬಾರದು ರುಚಿ ಕೂಡ ಇರಲ್ಲ ಆರೋಗ್ಯ ಕ್ಕೆ ಒಳ್ಳೇದು ಕೂಡ ಅಲ್ಲ.. ನಾವು ಆದಷ್ಟು ಬಿಸಿಲು ನೀರು ಇದ್ದ ಕಡೆ ಬೆಳೆಸಿದ್ರೆ ತುಂಬಾ ಒಳ್ಳೆಯದು..



ಉಪಯೋಗ:

ಬಸಳೆ ಸೊಪ್ಪಿನಲ್ಲಿ ಹಲವಾರು ಪೌಷ್ಟಿಕ ಸತ್ವ ಗಳಿಂದ ಕೂಡಿದ ಕಾರಣ ಆರೋಗ್ಯಕ್ಕೆ ತುಂಬಾ ಒಳ್ಳೆಯದು....ಬಸಳೆ ಸೊಪ್ಪಿನಲ್ಲಿ ಕಡಿಮೆ ಕ್ಯಾಲೊರಿ ಇರುತ್ತದೆ ಹಾಗೂ" ವಿಟಮಿನ್ "ಎ"ವಿಟಮಿನ್' ಬಿ' ವಿಟಮಿನ್ 'ಸಿ 'ಹಾಗೂ ಕಬ್ಬಿಣದ ಅಂಶ ಕ್ಯಾಲ್ಸಿಯಂ , ಪೊಟ್ಯಾಶಸಿಯಂ ಎಲ್ಲಾ ಖನಿಜಂಶಗಳು ಇದರಲ್ಲಿದೆ. ಬಾಯಲ್ಲಿ ಆಗುವ ಹುಣ್ಣಿಗೆ ಇದು ಉಪಕಾರಿ ಹಾಗೂ ದೇಹದ ಉಷ್ಣತೆಯನ್ನು ತಂಪಾಗಿ ಇಡುತ್ತದೆ. ನೆನಪಿನ ಶಕ್ತಿಯನ್ನು ಕೂಡ ಜಾಸ್ತಿ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ತಿಳಿಸಲಾಗಿದೆ.. ಹೃದಯದ ರಕ್ತನಾಳ ಸಮಸ್ಯೆಯನ್ನು ದೂರ ಮಾಡಬಹುದು ಎಂದು ಹೇಳಲಾಗಿದೆ . ಹೃದಯ ಸಂಬಂಧಿತ ಖಾಯಿಲೆ ಹಾಗೂ ಪಾರ್ಶ್ವ ವಾಯುವನ್ನು ಕೂಡ ತಪ್ಪಿಸಬಹುದು ಎಂದು ಸಂ ಶೋ ಧನೆ ಧನೆಯಲ್ಲಿ ತಿಳಿಸಲಾಗಿದೆ. ಹಿಂದಿನ ಕಾಲದಲ್ಲಿ ಹಿರಿಯರು ಇದನ್ನು ಯಥೋಚ್ಚ ವಾಗಿ ಸೇವಿಸುತ್ತಿದ್ದರು.. ಗೊತ್ತಿದ್ದು ಗೊತ್ತಿಲ್ಲದೆಯೋ ಅವರ ಆಹಾರ ಪದ್ಧತಿಯ ಕ್ರಮದಿಂದ ಮುಂಚಿನವರವರು ತುಂಬಾ ಆರೋಗ್ಯದಿಂದ ಏನು ಕಾಯಿಲೆಗಳಿಲ್ಲದೆ 90 ರಿಂದ 95ರ ವರುಷದವರೆಗೆ ಬದುಕುತ್ತಿದರು... ಇವಾಗಿನ ಕಾಲದಲ್ಲಿ ಎಲ್ಲಾ ಆಹಾರವು ಕೆಮಿಕಲ್ ನಿಂದ ಕೂಡಿದೆ....ನಾವು ಆರೋಗ್ಯವಾಗಿರಲು ಹಿಂದಿನ ಕಾಲದ ಆಹಾರ ಪದ್ಧತಿ ಕ್ರಮವನ್ನು ಅನುಸರಿಸಿದರೆ ಅರೋಗ್ಯವಾಗಿರಬಹುದು ಎಂದು ನನ್ನ ಅಭಿಪ್ರಾಯ..ನಮ್ಮ ಆಹಾರ ಕ್ರಮ ಹೇಗೆ ಇರಬೇಕು ಅಂದರೆ"ಜೀವಿಸರಲೆಂದು ಉಣ್ಣಬೇಕು ಹೊರತು ಉಣ್ಣಲೆಂದೇ ಜೀವಿಸಬಾರದು"



ಬರಹ:ಆಶಾ ನಾಯಕ್. ಪುತ್ತೂರು 

ಕೃಷಿಕೆ

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page