ಸತ್ತ ಹೆಬ್ಬಾವನ್ನು ಹಿಡಿದು ಸ್ಕಿಪ್ಪಿಂಗ್ ಆಡಿದ ಮಕ್ಕಳು...!!
- ಸಂಪಾದಕೀಯ
- Mar 10
- 1 min read
ಸತ್ತ ಹೆಬ್ಬಾವನ್ನು ಹಿಡಿದು ಸ್ಕಿಪ್ಪಿಂಗ್ ಆಡಿದ ಮಕ್ಕಳು...!!

ಆಸ್ಟ್ರೇಲಿಯಾದ ವೂರಾಬಿಂಡಾ ಎಂಬಲ್ಲಿ ಒಂದಷ್ಟು ಮಕ್ಕಳು ಯಾವುದೇ ಭಯವಿಲ್ಲದೆ ನಿರ್ಭೀತಿಯಿಂದ ಸತ್ತ ಹಾವನ್ನು ಹಗ್ಗದಂತೆ ಕೈಯಲ್ಲಿ ಹಿಡಿದುಕೊಂಡು ಸ್ಕಿಪ್ಪಿಂಗ್ ಆಡಿದ್ದಾರೆ. ಕಪ್ಪು ತಲೆಯ ವಿಶೇಷ ಹೆಬ್ಬಾವನ್ನು ಕೈಯಲ್ಲಿ ಹಿಡಿದು ಮಕ್ಕಳು ಹೀಗೆ ಆಟವಾಡಿದ್ದು, ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಇಲ್ಲಿನ ಪರಿಸರ, ವಿಜ್ಞಾನ, ಪ್ರವಾಸೋದ್ಯಮ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದೆ.
ಈ ಕುರಿತ ವಿಡಿಯೋವನ್ನು clowndownunder ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದ್ದು, "ಸತ್ತ ಹೆಬ್ಬಾವನ್ನು ಸ್ಕಿಪ್ಪಿಂಗ್ ಹಗ್ಗವಾಗಿ ಬಳಸಿದ ಆಸ್ಟ್ರೇಲಿಯಾದ ಮಕ್ಕಳು" ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

Comments