ಬೋರ್‌ವೆಲ್ ಕೊರೆಸುವಾಗ ಬಾನೆತ್ತರಕ್ಕೆ ಚಿಮ್ಮಿದ ನೀರು ; ಖುಷಿಗೆ ಹೃದಯ ತುಂಬಿ ಕುಣಿದ ರೈತ...!
- ಸಂಪಾದಕೀಯ
- Mar 6
- 1 min read
ಬೋರ್‌ವೆಲ್ ಕೊರೆಸುವಾಗ ಬಾನೆತ್ತರಕ್ಕೆ ಚಿಮ್ಮಿದ ನೀರು ; ಖುಷಿಗೆ ಹೃದಯ ತುಂಬಿ ಕುಣಿದ ರೈತ...!

ರೈತರೊಬ್ಬರು ಬೋರ್‌ವೆಲ್ ಕೊರೆಸುವಾಗ ನೀರು ಸಿಕ್ಕ ಖುಷಿಗೆ ಹೃದಯ ತುಂಬಿ ಕುಣಿದಿದ್ದಾರೆ. ಕೃಷಿಯ ಸಲುವಾಗಿ ಜಮೀನಿನಲ್ಲಿ ಕೊಳವೆ ಬಾರಿ ಕೊರೆಸಿದ್ದು, ಹೀಗೆ ಬೋರ್‌ವೆಲ್ ಕೊರೆಯುವಾಗ ಮುಗಿಲೆತ್ತರಕ್ಕೆ ನೀರು ಚಿಮ್ಮಿದ್ದು, ಈ ಖುಷಿಗೆ ರೈತ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ.
ಹೊಲದಲ್ಲಿ ಬೋರ್‌ವೇಲ್ ಕೊರೆಸುವಾಗ ನೀರು ಬಾನೆತ್ತರಕ್ಕೆ ಚಿಮ್ಮಿದ್ದು, ಗಂಗೆ ಸಿಕ್ಕ ಖುಷಿಗೆ ರೈತ ಕುಣಿದು ಕುಪ್ಪಳಿಸಿದ್ದಾರೆ. ಜೊತೆಗೆ ಆ ನೀರನ್ನು ತೀರ್ಥದಂತೆ ಒರೆಸಿಕೊಂಡಿದ್ದಾರೆ. ಈ ಹೃದಯಸ್ಪರ್ಶಿ ದೃಶ್ಯ ಸಖತ್ ವೈರಲ್ ಆಗುತ್ತಿದೆ.
NaaTelanganaa ಹೆಸರಿನ ಎಕ್ಸ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, "ಈ ಸಂತೋಷವೇನು ಎಂದು ಎಲ್ಲರಿಗೂ ಅರ್ಥವಾಗಲ್ಲ" ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

Comments