HMPV ಮಹಾಮಾರಿಗೆ ಕಂಗೆಟ್ಟ ಚೀನಾ ; ಏನಿದು ಕೋವಿಡ್ 19 ಮಾದರಿಯ ವೈರಸ್?
- ಸಂಪಾದಕೀಯ
- Jan 3
- 1 min read
HMPV ಮಹಾಮಾರಿಗೆ ಕಂಗೆಟ್ಟ ಚೀನಾ ; ಏನಿದು ಕೋವಿಡ್ 19 ಮಾದರಿಯ ವೈರಸ್?

2020ರಲ್ಲಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್ 19 ಸಾಂಕ್ರಾಮಿಕ ಕಾಯಿಲೆಯ ಭೀತಿಯಿಂದ ದೇಶಗಳು ಹೊರಬಂದು ಸಹಜಸ್ಥಿತಿಗೆ ಮರಳುತ್ತಿರುವ ಈ ಸಮಯದಲ್ಲಿ ಚೀನಾದಲ್ಲಿ ಮತ್ತೊಂದು ಮಹಾಮಾರಿ ಸೋಂಕು ಹಬ್ಬುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಸುದ್ದಿ ಏಷ್ಯಾದಾದ್ಯಂತ ಕಳವಳ ಮೂಡಿಸಿದೆ. ಚೀನಾದಲ್ಲೀಗ ಉಸಿರಾಟದ ಅನಾರೋಗ್ಯ ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ಆಸ್ಪತ್ರೆಗಳು ಮತ್ತು ಹೆಲ್ತ್ ಕೇರ್ ಸೆಂಟರ್ ಗಳು ತುಂಬಿ ತುಳುಕುತ್ತಿರುವುದಾಗಿ ವರದಿಯಾಗಿದ್ದು, ಚೀನಾದಲ್ಲಿ ಹ್ಯೂಮನ್ ಮೆಟಾಪ್ ನ್ಯೂಮೋ ವೈರಸ್ (HMPV) ಹೆಚ್ಚಳವಾಗುತ್ತಿರುವ ಕಳವಳಕಾರಿ ವಿಷಯ ಆರೋಗ್ಯ ತಜ್ಞರನ್ನು ಚಿಂತೆಗೀಡು ಮಾಡಿದೆ ಎಂದು ತಿಳಿದುಬಂದಿದೆ. ಚೀನಾದ ಆರೋಗ್ಯಾಧಿಕಾರಿಗಳ ಮಾಹಿತಿಯ ಪ್ರಕಾರ, ಈ ಎಚ್.ಎಂ.ಪಿ.ವಿ ವೈರಸ್ ಚೀನಾದ ಉತ್ತರ ಭಾಗದಲ್ಲಿ ವೇಗವಾಗಿ ಹರಡುತ್ತಿದ್ದು, ಸಾವಿರಾರು ಜನರು ಉಸಿರಾಟದ ತೊಂದರೆಗೆ ಸಿಲುಕಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿಸಿದೆ. ಈ ಮೈಕ್ರೋಪ್ಲಾಸ್ಮಾ ನ್ಯುಮೋನಿಯಾ ಎಲ್ಲಾ ವಯೋಮಾನದವರ ಮೇಲೂ ಪರಿಣಾಮ ಬೀರುತ್ತಿದ್ದು, ಮುಖ್ಯವಾಗಿ ಮಕ್ಕಳಿಗೆ ಹೆಚ್ಚು ಮಾರಕವಾಗಿರುವುದರಿಂದ ಸಾರ್ವಜನಿಕ ಆರೋಗ್ಯದ ಬಗ್ಗೆ ಚೀನಾ ಕಳವಳ ವ್ಯಕ್ತಪಡಿಸಿದೆ.
Commentaires