India vs England 2nd ODI : ಸಹ ಆಟಗಾರನ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ...!
- ಸಂಪಾದಕೀಯ

- Feb 10
- 1 min read
India vs England 2nd ODI : ಸಹ ಆಟಗಾರನ ವಿರುದ್ಧ ರೇಗಾಡಿದ ರೋಹಿತ್ ಶರ್ಮಾ...!

ಕಟಕ್ ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಪಂದ್ಯದ ವೇಳೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸಹ ಆಟಗಾರನ ವಿರುದ್ಧ ರೇಗಾಡಿದ ಘಟನೆ ನಡೆದಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿತ್ತು. ಭರ್ಜರಿ ಆರಂಭದೊಂದಿಗೆ ಇಂಗ್ಲೆಂಡ್ 30 ಓವರುಗಳಲ್ಲಿ 3 ವಿಕೆಟ್ ಕಳೆದು 163 ರನ್ ಕಲೆ ಹಾಕಿತ್ತು.
ಈ ಹಂತದಲ್ಲಿ 32ನೇ ಓವರ್ ಎಸೆಯಲು ಬಂದ ಹರ್ಷಿತ್ ರಾಣಾ ಓವರ್ ಥ್ರೋ ಮೂಲಕ ಫೋರ್ ನೀಡಿದ್ದಾರೆ. ರಾಣಾ ಎಸೆತದಲ್ಲಿ ಜೋಸ್ ಬಟ್ಲರ್ ರಕ್ಷಣಾತ್ಮಕವಾಗಿ ಆಡಿದ್ದರು. ಇತ್ತ ಚೆಂಡು ಕೈಗೆ ಸಿಗುತ್ತಿದ್ದಂತೆ ಸ್ಟ್ರೈಕ್ ನಲ್ಲಿದ್ದ ಬಟ್ಲರ್ ನನ್ನು ರನೌಟ್ ಮಾಡಲು ರಾಣಾ ಮುಂದಾಗಿದ್ದಾರೆ.
ಹರ್ಷಿತ್ ರಾಣಾ ಎಸೆದ ಥ್ರೋ ನೇರವಾಗಿ ಬೌಂಡಿಯತ್ತ ಸಾಗಿದೆ. ಇದರಿಂದ ಕುಪಿತಗೊಂಡ ರೋಹಿತ್ ಶರ್ಮಾ ನಿನಗೇನು ಬುದ್ದಿಯಿಲ್ವಾ ಎಂಬರ್ಥದಲ್ಲಿ ಹರ್ಷಿತ್ ವಿರುದ್ಧ ರೇಗಾಡಿದ್ದಾರೆ. ಇದೀಗ ರೋಹಿತ್ ಶರ್ಮಾ ರೇಗಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.














Comments