IPL 2025 : ಐಪಿಎಲ್ ನಡುವೆ ವಿರಾಟ್ ಕೊಹ್ಲಿ ನೋವಿನ ಮಾತು
- ಸಂಪಾದಕೀಯ
- Mar 24
- 1 min read
IPL 2025 : ಐಪಿಎಲ್ ನಡುವೆ ವಿರಾಟ್ ಕೊಹ್ಲಿ ನೋವಿನ ಮಾತು

ಐಪಿಎಲ್ ಪಂದ್ಯದ ನಂತರ ತಮ್ಮ ದುಃಖಕ್ಕೆ ಕಾರಣವೇನು ಎಂಬುದನ್ನು ವಿವರಿಸುತ್ತಿರುವ ಅವರ ಸಂದರ್ಶನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಕೊಹ್ಲಿ ಹೇಳಿರುವುದೇನು ಎಂಬುದರ ವಿವರ ಇಲ್ಲಿದೆ.
ಕೊಹ್ಲಿ ನೋವಿನ ಮಾತು
ಐಪಿಎಲ್ ಪಂದ್ಯದ ನಂತರ ವಿರಾಟ್ ಕೊಹ್ಲಿ ಒಂದೇ ವರ್ಷದಲ್ಲಿ ನನ್ನ ಹೃದಯ ಎರಡು ಬಾರಿ ಒಡೆದಿದೆ ಎಂದು ಹೇಳುತ್ತಿರುವುದು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ. ವಿರಾಟ್ ಪ್ರಕಾರ, 2016 ರಲ್ಲಿ ವಿರಾಟ್ ಕೊಹ್ಲಿಗೆ ಎರಡು ಆಘಾತಗಳು ಎದುರಾಗಿದ್ದವು. ಇದರಲ್ಲಿ ಮೊದಲನೆಯದ್ದು, 2016 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಟ್ರೋಫಿ ಗೆಲ್ಲಲು ವಿಫವಾಗಿತ್ತು. ಎರಡನೇಯದ್ದು ಅದೇ ವರ್ಷ ಐಪಿಎಲ್ ಫೈನಲ್‌ನಲ್ಲಿ ಆರ್‌ಸಿಬಿಯ ಸೋಲು. ಈ ಎರಡು ಘಟನೆಗಳು ಕೊಹ್ಲಿಯ ಹೃದಯ ಒಡೆದಿದ್ದವು ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ.
2016 ರ ಐಪಿಎಲ್‌ನಲ್ಲಿ ವಿರಾಟ್ ಪ್ರದರ್ಶನ
ವಿರಾಟ್ ಕೊಹ್ಲಿ ಅವರ ಪ್ರದರ್ಶನದ ದೃಷ್ಟಿಯಿಂದ ಐಪಿಎಲ್ 2016 ಈ ಕ್ರಿಕೆಟ್ ಲೀಗ್‌ನ ಅತ್ಯುತ್ತಮ ಸೀಸನ್ ಆಗಿದೆ. ಏಕೆಂದರೆ ಆ ಸೀಸನ್ನಲ್ಲಿ ಅವರು ಗಳಿಸಿದ ರನ್‌ಗಳ ಸಂಖ್ಯೆ ಇದುವರೆಗಿನ ಯಾವುದೇ ಆವೃತ್ತಿಯಲ್ಲಿ ಯಾವುದೇ ಬ್ಯಾಟ್ಸ್‌ಮನ್ ಗಳಿಸಿದ ರನ್‌ಗಳಿಗಿಂತ ಹೆಚ್ಚಾಗಿದೆ. 2016 ರ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ 973 ರನ್ ಕಲೆಹಾಕಿದ್ದರು. ಇದು ಒಂದು ಆವೃತ್ತಿಯಲ್ಲಿ ಬ್ಯಾಟ್ಸ್‌ಮನ್ ಒಬ್ಬ ಕಲೆಹಾಕಿದ ಅತ್ಯಧಿಕ ಮೊತ್ತವಾಗಿದೆ. ಇದುವರೆಗೆ ಈ ದಾಖಲೆಯನ್ನು ಯಾರಿಗೂ ಮುರಿಯಲು ಸಾಧ್ಯವಾಗಿಲ್ಲ.
ಇದು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡ. ಐಪಿಎಲ್‌ನಲ್ಲಿ 8000 ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಎಂಬ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ಅಲ್ಲದೆ ಒಂದೇ ಫ್ರಾಂಚೈಸಿ ಪರ ಕೊಹ್ಲಿ ಈ ಸಾಧನೆ ಮಾಡಿರುವುದು ವಿಶೇಷ.

Comments