ಲೀಕ್ ಆಯ್ತು RCB ತಂಡದ ಹೊಸ ಜೆರ್ಸಿ ಫೋಟೋ...!?
- ಸಂಪಾದಕೀಯ
- Mar 3
- 1 min read
ಲೀಕ್ ಆಯ್ತು RCB ತಂಡದ ಹೊಸ ಜೆರ್ಸಿ ಫೋಟೋ...!?


(ಲೀಕ್ ಆಗಿರುವ ಫೋಟೋ)
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಆರಂಭಕ್ಕೆ ಇನ್ನುಳಿದಿರುವುದು ಕೇವಲ ದಿನಗಳು ಮಾತ್ರ. ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳ ಹೊಸ ಕಿಟ್ ಅನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಆರ್ಸಿಬಿ ತಂಡದ ನೂತನ ಜೆರ್ಸಿಯ ವಿನ್ಯಾಸ ಕೂಡ ರೆಡಿಯಾಗಿದೆ.
ಈ ಹೊಸ ಜೆರ್ಸಿಯೊಂದಿಗೆ ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದುಬೈನ ಹೊಟೇಲ್ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿಗಾಗಿ ದುಬೈನಲ್ಲಿರುವ ಕೊಹ್ಲಿಯು ಆರ್ಸಿಬಿ ತಂಡದ ಜೆರ್ಸಿಯ ಫೋಟೋಶೂಟ್ನಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ.
ಇದರ ಬೆನ್ನಲ್ಲೇ ಕಿಂಗ್ ಕೊಹ್ಲಿ ಧರಿಸಿರುವ ನೂತನ ಆರ್ಸಿಬಿ ತಂಡದ ಜೆರ್ಸಿಯೊಂದರ ಫೋಟೋ ಕೂಡ ಲೀಕ್ ಆಗಿದೆ. ಸದ್ಯ ಲೀಕ್ ಆಗಿರುವ ಫೋಟೋದಂತೆ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕಪ್ಪು ಮತ್ತು ಕೆಂಪು ಬಣ್ಣದ ವಿನ್ಯಾಸದ ಜೆರ್ಸಿಯೊಂದಿಗೆ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.

Comentarios