ಮಾ.27 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್(IPL) ಆರಂಭ
- ಸಂಪಾದಕೀಯ
- Jan 28
- 1 min read
ಮಾ.27 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್(IPL) ಆರಂಭ

ಭಾರತೀಯ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ನಿರೀಕ್ಷಿಸುತ್ತಿರುವ ಈ ವರ್ಷದ ‘ಇಂಡಿಯನ್ ಪ್ರೀಮಿಯರ್ ಲೀಗ್’ (ಐಪಿಎಲ್), ಮಾ. 21ರಿಂದ ಆರಂಭವಾಗಲಿದೆ ಎಂದು ಐಪಿಎಲ್ ಮಂಡಳಿಯ ಮುಖ್ಯಸ್ಥ ಅರುಣ್ ಧುಮಾಲ್ ತಿಳಿಸಿದ್ದಾರೆ.
ಜ.27ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 182 ಆಟಗಾರರು ಈ ಬಾರಿಯ ಐಪಿಎಲ್ ನಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಎರಡು ದಿನಗಳ ಕಾಲ ನಡೆದ ಮೆಗಾ ಹರಾಜಿನಲ್ಲಿ 639.15 ಕೋಟಿ ರೂ. ಗಳೊಂದಿಗೆ ಆಟಗಾರರನ್ನು ಖರೀದಿಸಲಾಗಿದೆ. “ಐಪಿಎಲ್ ವೇಳಾಪಟ್ಟಿಯನ್ನು ಪಂದ್ಯಾವಳಿಯಲ್ಲಿನ ಹೂಡಿಕೆದಾರರೊಂದಿಗೆ ಸಮಾಲೋಚಿಸಿ ಮುಂದಿನ ಕೆಲವು ದಿನಗಳಲ್ಲಿ ಪ್ರಕಟಿಸಲಾಗುವುದು’’ ಎಂದು ಧುಮಾಲ್ ಖಚಿತಪಡಿಸಿದ್ದಾರೆ.
"ಐಪಿಎಲ್ ಸೀಸನ್ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದೆ. ಮಾರ್ಚ್ 21 ಕ್ಕೆ ಸಮಯವನ್ನು ನಿಗದಿಪಡಿಸಲಾಗಿದೆ. ಮತ್ತು ಕೆಲವೇ ದಿನಗಳಲ್ಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ" ಎಂದು ಧುಮಾಲ್ ಸಂಸದ್ ಖೇಲ್ ಮಹಾಕುಂಭ್‌ನ ಮೂರನೇ ಆವೃತ್ತಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಐಪಿಎಲ್ ನಿಯಮಗಳಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಿಲ್ಲ, ಆದರೆ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಎರಡರಿಂದ ಮೂರು ಪಂದ್ಯಗಳು ನಡೆಯಲಿವೆ’’ ಎಂದು ಅವರು ಭರವಸೆ ನೀಡಿದ್ದಾರೆ.
"ಖಂಡಿತವಾಗಿಯೂ ಇಲ್ಲಿ ಬಿಲಾಸ್‌ಪುರದಲ್ಲಿ ಹಲವು ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ. ಮುಂದಿನ ಬಾರಿಯೂ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಯಾವುದೇ ಪಂದ್ಯಗಳು ನಡೆಯಲಿ, ಬಿಲಾಸ್‌ಪುರಕ್ಕೆ ಖಂಡಿತವಾಗಿಯೂ ಆಫರ್ ಸಿಗುತ್ತದೆ. “ಧರ್ಮಶಾಲಾಕ್ಕೂ ಪಂದ್ಯಗಳನ್ನು ನೀಡುವ ಬಗ್ಗೆ ನಿರ್ಧರಿಸಲಾಗುವುದು’’ ಎಂದು ಅವರು ಉತ್ತರಿಸಿದರು.
ಯಾವುದೇ ಬಿಗಿ ನಿಯಮವಿಲ್ಲ : ಇನ್ನು, ಈ ಬಾರಿಯ, ಐಪಿಎಲ್ ನಿಯಮಗಳಲ್ಲಿ ಯಾವುದೇ ಮಹತ್ವದ ಬದಲಾವಣೆಗಳಿಲ್ಲ. ವಿಶ್ವದ ಅತ್ಯಂತ ಪ್ರಮುಖ ಕ್ರಿಕೆಟ್ ಲೀಗ್ ಇದಾಗಿದ್ದು, ಇಲ್ಲಿ ವಿಶ್ವದ ಆಟಗಾರರು ಬಂದು ಆಡುತ್ತಾರೆ. ಈ ಪಂದ್ಯಾವಳಿಯನ್ನು ಅತ್ಯಂತ ಸ್ಪರ್ಧಾತ್ಮಕ ಮನೋಭಾವದಿಂದ ಆಯೋಜಿಸಲಾಗಿದೆ ಮತ್ತು ಖಂಡಿತವಾಗಿಯೂ ಈ ಬಾರಿ ಅದು ಉತ್ತಮವಾಗಿರುತ್ತದೆ ಎಂದು ಅವರು ತಿಳಿಸಿದರು.
Comments