ನಾನು ಪತ್ರಕರ್ತ . ಕಾಮ್ ಅಂದ್ರೆ ಏನು ?
- ಸಂಪಾದಕೀಯ
- Dec 3, 2024
- 1 min read
ನಾನು ಪತ್ರಕರ್ತ . ಕಾಮ್ ಅಂದ್ರೆ ಏನು ?

ನಮ್ಮೂರಲ್ಲಿ ಏನೇನೋ ಆಗ್ತಾ ಇದೆ ಸರ್..!!
ಏನಾಗ್ತ ಇದೆ ಮೇಡಮ್..!!
ಅಂದ್ರೆ ಕಾರ್ಯಕ್ರಮಗಳು,
ಏನೇಲ್ಲಾ ಕಾರ್ಯಕ್ರಮ ??
ಜಾತ್ರೆ, ಕೋಲ,ಹುಟ್ಟುಹಬ್ಬ, ಶಾಲ ಕಾರ್ಯಕ್ರಮ, ಅಂಗನವಾಡಿ ಕಾರ್ಯಕ್ರಮ, ಹಾಗೂ ಹಲವಾರು ಸಮಸ್ಯೆ ಕೂಡ ನಮ್ಮೂರಲ್ಲಿ ಇದೆ, ಇದೆಲ್ಲವೂ ಕೂಡ ಹೇಗೆ ಎಲ್ರಿಗೂ ಗೊತ್ತಾಗೋದು..!? ನಾನು ಅಲ್ಪಸ್ವಲ್ಪ ಬರಿಯೋಕೆ ಉತ್ಸಾಹ ಇದೆ.. ಆದ್ರೆ ಇದಕ್ಕೆಲ್ಲ ವೇದಿಕೆ ಇಲ್ಲಾ ಸರ್..!!
ಓಹ್.! ಹೌದ..!
ಹಾಗಿದ್ರೆ ಒಂದು ಮಾತು ಹೇಳಿ ಹಾಗೂ ನಿಮ್ಮ ಮನ್ಸಲ್ಲಿ ಯಾವತ್ತೂ ಇರ್ಲಿ..
ನಾನು ಪತ್ರಕರ್ತ
ಸುದ್ದಿ ಏನೇ ಇರಲಿ ನೈಜ್ಯ, ಶುದ್ದ, ಸ್ಪಷ್ಟವಾಗಿದ್ದರೆ ಹಾಗೂ ಬಿತ್ತರಗೊಳಿಸಬಗುದೆಂದರೆ ತಡಬೇಡ ನೀವೇ ಬರೆಯಿರಿ, ಕಳುಹಿಸಿ,, ಯಾಕೆಂದರೆ ನೀವೇ ನಿಮ್ಮೂರಿನ ಪತ್ರಕರ್ತರು..! ಬರಹದ ಜೊತೆಗೊಂದು ಪೋಟೋ ಕೂಡ ನಿಮ್ಮ ಪೋನಲ್ಲಿ ಕ್ಲಿಕ್ಕಿಸಿ ಇರಲಿ.!! ನಿಮ್ಮೂರಿನ ಸುದ್ದಿಯನ್ನು ಉಚಿತವಾಗಿ ಜಗತ್ತಿಗೆ ನಾವು ತಲುಪಿಸುತ್ತೇವೆ..!!
Comentarios