top of page

IND vs ENG: ಇಂಗ್ಲೆಂಡ್ ಪ್ಲೇಯಿಂಗ್ 11 ನಲ್ಲಿ ಒಂದು ಬದಲಾವಣೆ ಖಚಿತ...!

IND vs ENG: ಇಂಗ್ಲೆಂಡ್ ಪ್ಲೇಯಿಂಗ್ 11 ನಲ್ಲಿ ಒಂದು ಬದಲಾವಣೆ ಖಚಿತ...!

ree

ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡ ಒಂದು ಬದಲಾವಣೆ ಮಾಡಿಕೊಂಡಿದೆ. ತಂಡದ ಪ್ರಮುಖ ವೇಗಿ ಗಸ್ ಅಟ್ಕಿನ್ಸನ್ ಅವರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಲಾಗಿದ್ದು, ಅವರ ಬದಲಿಗೆ ಮತ್ತೋರ್ವ ವೇಗಿ ಬ್ರೈಡನ್ ಕಾರ್ಸ್​ಗೆ ಸ್ಥಾನ ನೀಡಲಾಗಿದೆ. ಕೊಲ್ಕತ್ತಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 2 ಓವರ್​​ಗಳನ್ನು ಎಸೆದಿದ್ದ ಗಸ್ ಅಟ್ಕಿನ್ಸನ್ ಬರೋಬ್ಬರಿ 38 ರನ್ ನೀಡಿ ದುಬಾರಿಯಾಗಿದ್ದರು. ಹೀಗಾಗಿ ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಿಂದ ಅವರನ್ನು ಕೈ ಬಿಟ್ಟು, ಬ್ರೈಡನ್ ಕಾರ್ಸ್ ಅವರನ್ನು ಕಣಕ್ಕಿಳಿಸಲು ಇಂಗ್ಲೆಂಡ್ ನಿರ್ಧರಿಸಿದೆ.


ಬ್ರೈಡನ್ ಕಾರ್ಸ್ ಪ್ರದರ್ಶನ : 29 ವರ್ಷದ ಬ್ರೈಡನ್ ಕಾರ್ಸ್ ಇಂಗ್ಲೆಂಡ್ ಪರ ಈವರೆಗೆ ಆಡಿರುವುದು ಕೇವಲ 4 ಟಿ20 ಪಂದ್ಯಗಳನ್ನು ಮಾತ್ರ. ಈ ವೇಳೆ 6 ವಿಕೆಟ್ ಕಬಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವಾಡಿದ್ದ ಕಾರ್ಸ್ 4 ಓವರ್​ಗಳಲ್ಲಿ 26 ರನ್ ನೀಡಿ 2 ವಿಕೆಟ್ ಕಬಳಿಸಿದ್ದರು.

ಇದೀಗ ಭಾರತದಲ್ಲಿ ಚೊಚ್ಚಲ ಟಿ20 ಪಂದ್ಯವಾಡಲು ಬ್ರೈಡನ್ ಕಾರ್ಸ್ ಸಜ್ಜಾಗಿದ್ದಾರೆ. ಆದರೆ ಈ ಪಂದ್ಯ ನಡೆಯುತ್ತಿರುವುದು ಸ್ಪಿನ್ ಸ್ನೇಹಿ ಪಿಚ್ ಚೆನ್ನೈನ ಎಂಎ ಚಿದರಂಬರಂ ಸ್ಟೇಡಿಯಂನಲ್ಲಿ. ಹೀಗಾಗಿ ಬ್ರೈಡನ್ ಕಾರ್ಸ್ 2ನೇ ಟಿ20 ಪಂದ್ಯದಲ್ಲಿ ಮಿಂಚಲಿದ್ದಾರಾ ಎಂಬುದೇ ಪ್ರಶ್ನೆ.


ಜೇಮಿ ಸ್ಮಿತ್​ಗೆ ಅವಕಾಶ : ಇಂಗ್ಲೆಂಡ್ ತಂಡವು ಈ ಬಾರಿ ಪ್ಲೇಯಿಂಗ್ ಇಲೆವೆನ್​ನಲ್ಲಿ ಜೇಮಿ ಸ್ಮಿತ್ ಅವರನ್ನು ಸಹ ಸೇರಿಸುವ ಸಾಧ್ಯತೆಯಿದೆ. ಏಕೆಂದರೆ ಆಂಗ್ಲರ ಪಡೆ ದ್ವಿತೀಯ ಟಿ20 ಪಂದ್ಯಕ್ಕೆ ಹೆಸರಿಸಲಾದ 12 ಆಟಗಾರರ ಪಟ್ಟಿಯಲ್ಲಿ ಯುವ ವಿಕೆಟ್ ಕೀಪರ್ ಬ್ಯಾಟರ್ ಜೇಮಿ ಸ್ಮಿತ್ ಕೂಡ ಸ್ಥಾನ ಪಡೆದಿದ್ದಾರೆ.


ಇಂಗ್ಲೆಂಡ್ ಸಂಭಾವ್ಯ ಪ್ಲೇಯಿಂಗ್ 11

  • ಬೆನ್ ಡಕೆಟ್

  • ಫಿಲ್ ಸಾಲ್ಟ್ (ವಿಕೆಟ್ ಕೀಪರ್)

  • ಜೋಸ್ ಬಟ್ಲರ್ (ನಾಯಕ)

  • ಹ್ಯಾರಿ ಬ್ರೂಕ್

  • ಲಿಯಾಮ್ ಲಿವಿಂಗ್‌ಸ್ಟೋನ್

  • ಜೇಕಬ್ ಬೆಥೆಲ್/ಜೇಮಿ ಸ್ಮಿತಿ

  • ಜೇಮಿ ಓವರ್‌ಟನ್

  • ಬ್ರೈಡನ್ ಕಾರ್ಸ್

  • ಜೋಫ್ರಾ ಆರ್ಚರ್

  • ಆದಿಲ್ ರಶೀದ್

  • ಮಾರ್ಕ್ ವುಡ್


ಇಂಗ್ಲೆಂಡ್ ಟಿ20 ತಂಡ: ಜೋಸ್ ಬಟ್ಲರ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್ (ಉಪನಾಯಕ), ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮೀ ಓವರ್ಟನ್, ಜಾಮಿ ಸ್ಮಿತ್, ಲಿಯಾಮ್ ಲಿವಿಂಗ್​ಸ್ಟೋನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್.

Comments


Top Stories

Stay updated with the latest news and stories from Karnataka. Subscribe to our newsletter for weekly updates.

© 2024 by NANU PATRAKARTHA. All rights reserved.

bottom of page